
ರಾಜ್ಯಾದ್ಯಂತ ಸರ್ಕಾರ ಒಂದು ಹಂತದ ಲಾಕ್ ಡೌನ್ ಬಳಿಕ ಈಗ ಮತ್ತೊಮ್ಮೆ 15 ದಿನಗಳ ಲಾಕ್ ಡೌನ್ ಘೋಷಿಸಿದ ಬೆನ್ನಲ್ಲೇ ದಿನಗೂಲಿ ಕಾರ್ಮಿಕರು ಹಾಗು ಸಮಾಜದ ಬಡ ಕುಟುಂಬಗಳ ಪಟ್ಟಿ ಮಾಡಿಕೊಂಡು, ಮಲೆನಾಡಿಗ.ಕಾಂ ತಂಡ ಅವರಿಗೆ ಉಚಿತವಾಗಿ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುತ್ತಿದೆ.
ಕಳೆದ ಒಂದು ವಾರದಿಂದ ಮಲೆನಾಡಿನ ಕೊಪ್ಪ, ಶೃಂಗೇರಿ ಹಾಗೂ ಎನ್ ಆರ್ ಪುರ ಭಾಗದಲ್ಲಿ ದಿನಸಿ ಕಿಟ್ ಗಳನ್ನು ಮಲೆನಾಡಿಗ.ಕಾಂ ತಂಡ ಹಂಚುತ್ತಿದ್ದು, ಈವರೆಗೂ ಸುಮಾರು 200 ಕ್ಕೂ ಹೆಚ್ಚು ಕಿಟ್ ಗಳನ್ನು ಬಡ ಹಾಗೂ ದಿನಗೂಲಿ ಕಾರ್ಮಿಕರಿಗೆ ಹಂಚಿದೆ. ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ತಂಡದ ಸದಸ್ಯ ಕಾರ್ತಿಕ್ ಕೊಪ್ಪ ಅವರು, ಕಳೆದ ಬಾರಿ ಲಾಕ್ ಡೌನ್ ನಲ್ಲಿಯೂ ಮಲೆನಾಡಿಗ.ಕಾಂ ತಂಡ ಅಗತ್ಯ ವಸ್ತುಗಳನ್ನು ಬಡ ಕುಟುಂಬಗಳಿಗೆ ವಿತರಿಸಿತ್ತು ಹಾಗೆಯೇ ಈ ಬಾರಿ ಕೂಡ ಬಡ ಕುಟುಂಬಗಳನ್ನು ಪಟ್ಟಿ ಮಾಡಿ ಅವರಿಗೆ ಕಿಟ್ ಗಳನ್ನು ತಲುಪಿಸುತ್ತಿದ್ದೇವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಉನ್ನತ ಕೆಲಸದಲ್ಲಿದ್ದ ಕಾರ್ತಿಕ್ ಹಾಗೂ ಸ್ವಾಗತ್ ಕಳೆದ ವರ್ಷ ಮಲೆನಾಡಿಗ.ಕಾಂ ಎಂಬ ವೆಬ್ ಸೈಟ್ (ಹಾಗು ಆ್ಯಪ್) ಪ್ರಾರಂಭಿಸಿದ್ದು, ಈ ಮೂಲಕ ಮಲೆನಾಡಿನ ಗೃಹ ಉತ್ಪನ್ನಗಳನ್ನು ಕರ್ನಾಟಕದ ಬೇರೆ ಬೇರೆ ಭಾಗದಲ್ಲಿರುವವರಿಗೆ ದೊರೆಯುವಂತೆ ಮಾಡಿದ್ದಾರೆ. ಮಲೆನಾಡಿನ ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಚಿಪ್ಸ್, ಸಾಂಬಾರು ಪುಡಿ, ಸಾರಿನ ಪುಡಿ, ಕಷಾಯ ಪುಡಿ, ಜೇನುತುಪ್ಪ, ತುಪ್ಪ, ಅರಿಶಿಣ ಸೇರಿದಂತೆ ಎಲ್ಲಾ ಪ್ರಾಡಕ್ಟ್ ಗಳು ಒಂದೇ ಸೂರಿನಡಿ ಲಭ್ಯವಾಗುವಂತೆ ಮಾಡಿದ್ದಾರೆ. ಇದರಿಂದ ಬಂದ ಲಾಭದ ಸಣ್ಣ ಮೊತ್ತವೊಂದನ್ನು ಮಲೆನಾಡಿನ ಬಡ ಜನರಿಗಾಗಿ ಮೀಸಲಿಟ್ಟಿರುವ ಮಲೆನಾಡಿಗ.ಕಾಂ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ನ್ಯೂಸ್ ಮಲ್ನಾಡ್ ಆಶಿಸುತ್ತದೆ.
ಇನ್ನಷ್ಟು ಮಾಹಿತಿಗಾಗಿ : www.malenadiga.com

0 Comments