ಕಡು ಬಡತನದಲ್ಲಿ ಬೆಳೆದು, ಮುಳ್ಳಿನ ಛಲದ ಹಾದಿಯಲ್ಲಿ ಸಾಗಿ ಇತ್ತೀಚೆಗಷ್ಟೇ ಪಿಎಚ್ಡಿ ಪದವಿ ಗಳಿಸಿದ್ದ ಕಳಸದ ಸಂಪ್ಲಿ ಗ್ರಾಮದ ರಂಜಿತ್ (33ವರ್ಷ) ಪದವಿಯನ್ನು ಹೆಸರಿನ ಮುಂದೆ ಹಾಕಿಕೊಳ್ಳುವ ಮೊದಲೇ ನೆನ್ನೆ ರಾತ್ರಿ ಕಳಸ ತಾಲೂಕು ಸುಂಕಸಾಲೆ ಗ್ರಾಮ ಪಂಚಾಯತ್ ಸಮೀಪದ ತಿರುವಿನಲ್ಲಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಸುಂಕಸಾಲೆ ತಿರುವಿನಲ್ಲಿ ಆರು ಅಡಿ ಆಳಕ್ಕೆ ಬೈಕ್ ಬಿದ್ದ ಪರಿಣಾಮ ತೀವ್ರ ಅಪಘಾತಕ್ಕೆ ಒಳಗಾಗಿದ್ದರು. ಘಟನೆ ರಾತ್ರಿ ನಡೆದ ಕಾರಣ ಕಂದಕಕ್ಕೆ ಬಿದ್ದಿರುವುದು ಯಾರಿಗೂ ತಿಳಿಯದೆ ಹೋಗಿದೆ. ಇಂದು ಮದ್ಯಾಹ್ನ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ತಲುಪಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸ್ಥಳೀಯ ಸಮಾಜ ಸೇವಕರಾದ ಆರೀಫ್ ಅವರು ಮೂಡಿಗೆರೆ ಚಿತಾಗಾರಕ್ಕೆ ಮೃತದೇಹವನ್ನು ಸಾಗಿಸಿ ಮಾನವೀಯತೆ ಮೆರೆದಿದ್ದಾರೆ.
ಅಪಘಾತದಲ್ಲಿ ಮೃತರಾದ ರಂಜಿತ್ ಕುಮಾರ್ ಗೆ ಇತ್ತೀಚಿಗಷ್ಟೇ ಅವರು ಮಂಡಿಸಿದ್ದ An Evaluation Indian Railways Transport with Special Reference to South Western Railway ಎಂಬ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್ ಡಿ (PhD) ಪದವಿ ನೀಡಿ ಗೌರವಿಸಿತ್ತು.
ಹಿಂದುಳಿದವರ ಧ್ವನಿಯಾಗಿದ್ದ ದಲಿತ ನಾಯಕ ಹೂವಪ್ಪ ನಿಧನ
ಸುಮಾರು 20 ವರ್ಷಗಳಿಂದ ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದ ಅವರು ಕೋಮುವಾದ, ಜಾತೀಯತೆ, ಆಳುವ ಶಕ್ತಿಗಳ ವಿರುದ್ಧದ ನಿಲುವು ಹೊಂದಿದ್ದರು.



0 Comments