ಪೆಟ್ರೋಲ್ ನೂರರ ಗಡಿ ದಾಟಿದ್ದು ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಏರಿಸುತ್ತಿರುವುದನ್ನು ವಿರೋಧಿಸಿ ಇಂದು ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಕೇಂದ್ರದ ಹಲವೆಡೆ ಪ್ರತಿಭಟನೆ ನಡೆಸಿದರು.
ಒಂದೆಡೆ ಕೋವಿಡ್ ಕಾರಣದಿಂದ ಕಳೆದ ಒಂದು ವರ್ಷದಿಂದ ಜನರು ಆದಾಯವಿಲ್ಲದೇ ಹೈರಾಣಾಗಿದ್ದಾರೆ, ಇನ್ನೊಂದೆಡೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಕಡಿಮೆಯಿದೆ ಹಾಗೂ ಪೆಟ್ರೋಲ್ ಮೂಲ ಬೆಲೆ 35ರೂಪಾಯಿ ಇದೆ ಆದರೂ ಕೇಂದ್ರ ಸರ್ಕಾರ ಅತಿಯಾದ ಟ್ಯಾಕ್ಸ್ ಹಾಕಿ ಪೆಟ್ರೋಲ್, ಡೀಸೆಲ್ ದರವನ್ನು ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತೆ ಬೆಲೆ ಏರಿಸುತ್ತಲೇ ಬರುತ್ತಿದೆ. ಈ ಕೂಡಲೇ ಸರ್ಕಾರ ಇಂಧನವನ್ನು ಜಿಎಸ್ ಟಿ ವ್ಯಾಪ್ತಿಗೆ ತರಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪೆಟ್ರೋಲ್ ರೇಟ್ 100 ನಾಟೌಟ್ ಸುಲಿಗೆಕೋರ ಬಿಜೆಪಿಗೆ ಹೇಳಿ ಗೆಟ್ ಔಟ್" ಎಂಬ ಬೋರ್ಡ್ ಹಿಡಿದು ವಿಭಿನ್ನ ಪ್ರತಿಭಟನೆ ಮೂಲಕ ಜಿಲ್ಲಾ ಕಾಂಗ್ರೆಸ್ ಐಟಿ ವಿಭಾಗದಿಂದ ಪೆಟ್ರೋಲ್ ಬಂಕ್ ಎದುರು ಪ್ರತಿಭಟಿಸಿದರು. ಹಲವೆಡೆ ಪೆಟ್ರೋಲ್ ಬಂಕ್ ಎದುರು ರಸ್ತೆಗೆ ಖಾಲಿ ಕ್ಯಾನ್ ಎಸೆದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಸಾನ್ ಕಾಂಗ್ರೆಸ್, ಕಾಂಗ್ರೆಸ್ ಅಸಂಘಟಿತ ಕಾರ್ಯಕರ್ತರ ಘಟಕ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.



0 Comments