ಕಡೂರು: ಕಡೂರು ತಾಲ್ಲೂಕಿನಲ್ಲಿ ಯುವತಿಯೋರ್ವಳು ತನಗಿಂತ ಕಿರಿಯ ಬಾಲಕನನ್ನು ವರಿಸಿದ್ದಾಳೆ. ಈ ಸಂಬಂಧ ಯುವತಿ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
20 ವರ್ಷದ ಯುವತಿಗೆ ಸಾಮಾಜಿಕ ಜಾಲತಾಣದ ಮೂಲಕ 17 ವರ್ಷದ ಹುಡುಗನ ಪರಿಚಯವಾಗಿ ಈ ಪರಿಚಯ ಮುಂದೆ ಪ್ರೇಮಕ್ಕೆ ತಿರುಗಿದೆ, ಇಬ್ಬರೂ ವಿವಾಹವಾಗಲು ನಿರ್ಧರಿಸಿದ್ದರು. ಆದರೆ ಹುಡುಗ ಯುವತಿಗಿಂತ ಮೂರು ವರ್ಷ ಚಿಕ್ಕವನಾಗಿದ್ದನು.
ಆದರೂ ಸಹ ಎರಡೂ ಮನೆಯವರು ಸಹ ಈ ಪ್ರೇಮವಿವಾಹಕ್ಕೆ ಸಮ್ಮತಿಸಿದ್ದರು. ಹುಡುಗನ ಮನೆಯಲ್ಲಿಯೇ ಎರಡೂ ಕಡೆಯ ಸಂಬಂಧಿಕರು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಜೂನ್ 16ರಂದು ಮದುವೆ ನಡೆದಿದೆ.
ಈ ಬಗ್ಗೆ ಮಕ್ಕಳ ಸಹಾಯವಾಣಿಗೆ ಕೇಂದ್ರಕ್ಕೆ ಜೂನ್ 23ರಂದು ಮಾಹಿತಿ ದೊರೆತು ಮಕ್ಕಳ ಸಹಾಯವಾಣಿ ಸಿಬ್ಬಂದಿ ಹಾಗೂ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸ್ಥಳಕ್ಕೆ ತೆರಳಿ ಯುವತಿಯನ್ನು ವಶಕ್ಕೆ ಪಡೆದು ಸಧ್ಯ ಯುವತಿಯನ್ನು ಜಿಲ್ಲೆಯ ಸ್ವಾಧಾರ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ.


0 Comments