ಮಡಿಕೇರಿ ನಗರದ  ರಾಣಿಪೇಟೆಯ ಮನೆಯೊಂದರಲ್ಲಿ  ವ್ಯಕ್ತಿಯೊಬ್ಬ ಅಕ್ರಮ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಬಗ್ಗೆ ಮಾಹಿತಿ ಮೇರೆಗೆ ಜಿಲ್ಲಾ ಡಿಸಿಐಬಿ ಪೊಲೀಸರು ದಾಳಿ ನಡೆಸಿ ಒಟ್ಟು 6 ಮಂದಿ ಆರೋಪಗಳನ್ನು ಬಂಧಿಸಿ ಅವರಿಂದ ಅಂದಾಜು 50 ಸಾವಿರ ರೂ. ಮೌಲ್ಯದ  415 ಗ್ರಾಂ ತೂಕದ ಗಾಂಜಾ ಹಾಗೂ 35,760 ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ. 

ಕಳೆದ ಕೆಲವು ತಿಂಗಳುಗಳಿಂದ ಮಲೆನಾಡಿನ ಭಾಗದಲ್ಲಿ ಗಾಂಜಾ ಮಾರಾಟವು ಅವ್ಯಾಹತವಾಗಿ ನಡೆಯುತ್ತಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯು ಇದರ ವಿರುದ್ಧ ಸಮರ ಸಾರಿದ್ದು ಸಾಕಷ್ಟು ಪ್ರಕರಣಗಳು ಬೇಧಿಸಿ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ.

ನೆನ್ನೆಯ  ಈ ಪ್ರಕರಣದಲ್ಲಿ ಎಂ.ಅಸ್ಗರ್ ಅಲಿ, ಬಿನ್ ಎಂ.ಎಸ್ ಅಬ್ಬಾಸ್, ತ್ಯಾಗರಾಜ ಕಾಲೋನಿ, ಮಡಿಕೇರಿ, ಅಬ್ದುಲ್ ರಹೀಂ,  ಬಿನ್ ಮೊಹ್ಮದ್, ತ್ಯಾಗರಾಜ ಕಾಲೋನಿ, ಮಡಿಕೇರಿ, ಸಫಾನ್ ಅಹಮ್ಮದ್, ಬಿನ್ ಅಬ್ದುಲ್ ರಶೀದ್, ಅಯ್ಯಪ್ಪ ದೇವಸ್ಥಾನದ ಹತ್ತಿರ, ಸುಂಟಿಪೊಪ್ಪ, ನೌಶಾದ್ ಆಲಿ ಎಂ.ಕೆ, ಬಿನ್ ಖಾದರ್, ಆಜಾದ್ ನಗರ, ಮಡಿಕೇರಿ, ಜಬೀವುಲ್ಲಾ ಎಂ,  ಬಿನ್ W.M. ಶರೀಫ್, ಮಹದೇವಪೇಟೆ ಮಡಿಕೇರಿ ಮತ್ತು ಡಿ.ಆರ್.ಸುರೇಶ್ ಬಿನ್ ಡಿ.ಎಸ್. ರಾಜು, ಭಗವತಿನಗರ ಮಡಿಕೇರಿ ಇವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.

ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ಪ್ರಕರಣಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದ್ದು  ಅದರಂತೆ  ಡಿಸಿಐಬಿ ವೃತ್ತ ನಿರೀಕ್ಷಕರಾದ ಕುಮಾರ್ ಆರಾಧ್ಯ ಅವರ ನೇತೃತ್ವದಲ್ಲಿ ನಡೆಸಿದ ಈ ಕಾರ್ಯಾಚರಣೆಯಲ್ಲಿ ಎಎಸ್ಐ ಹಮೀದ್, ಸಿಬ್ಬಂದಿಗಳಾದ ಯೋಗೇಶ್ ಕುಮಾರ್, ನಿರಂಜನ್, ವಸಂತ, ಅನಿಲ್ ಕುಮಾರ್, ವೆಂಕಟೇಶ್, ಶರತ್ ರೈ, ಶಶಿಕುಮಾರ್ ಮತ್ತು ಮಹೇಶ್ ಭಾಗಿಯಾಗಿದ್ದು ಇವರುಗಳ ಕಾರ್ಯವೈಖರಿ ಯನ್ನು ಶ್ಲಾಘಿಸಲಾಗಿದೆ.