ಚಿಕ್ಕಮಗಳೂರು ಜಿಲ್ಲೆ ನರಸಿಂಹರಾಜಪುರ ಅರಣ್ಯ ವಲಯದ ಮುತ್ತಿನಕೊಪ್ಪ ಸಮೀಪ ಅಕ್ರಮವಾಗಿ ಸಾಗುವಾನಿ ಮರ ಸಾಗಾಟ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಒಂದು ಕಾರು ಸೇರಿದಂತೆ 4 ಜನ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಬಂಧಿಸಿದ್ದಾರೆ.

ಸಾಗುವಾನಿ ಜಾತಿಯ 0.172 ಘನಮೀಟರ್ ಬರುವ 4 ತುಂಡು  ಮರವನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಲಾಗಿದೆ.

ಮುತ್ತಿನಕೊಪ್ಪದ ಮೊಹಮ್ಮದ್ ಜಬಿ, ಲೋಬಿ, ಅಜಿತ್, ಹಾಗೂ ಪ್ರತಾಪ್ ಬಂಧಿತ ಆರೋಪಿಗಳು. ಮಾಹಿತಿ ತಲುಪಿತ್ತಿದ್ದಂತೆಯೇ ಆರೋಪಿಗಳನ್ನು ಬಂಧಿಸುವಲ್ಲಿ  ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಅರಣ್ಯಾಧಿಕಾರಿಗಳಾದ ಗೌಸ್, ಪರಮೇಶ್ವರ್. ಅರಣ್ಯ ರಕ್ಷಕರಾದ ರುದ್ರೇಶ್ ನಾಯಕ್, ಶ್ರೀಕಾಂತ್ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.