ಇಂದು ಆ ಮನೆಯಲ್ಲಿ ಪೂಜೆ ಮಾಡಿ, ಮನೆಗೆ ಬೇಕಾದ ವಸ್ತುಗಳ ಜೊತೆಗೆ ಮನೆಯನ್ನು ಅಜ್ಜಿಗೆ ಬಿಟ್ಟುಕೊಟ್ಟಾಗ ಆಕೆಗಾದ ಸಂತೋಷ ಪಾರವೇ ಇರಲಿಲ್ಲ. ಒಟ್ಟಿನಲ್ಲಿ ಕೆಲವೇ ದಿನಗಳಲ್ಲಿ ಒಂದು ಶ್ಲಾಘನೀಯ ಕಾರ್ಯ ಮಾಡಿದ ಸೂರು ಬಳಗದ ಕಾರ್ಯಕರ್ತರಿಗೂ ಒಂದು ಸಂತೃಪ್ತಿಯ ಭಾವ. ಮನೆಯ ಜೊತೆಗೆ ಅಜ್ಜಿಗೆ ಬೇಕಾಗುವ ದಿನಸಿ ಸಾಮಗ್ರಿಗಳು ಹಾಗೂ ದಿನನಿತ್ಯ ಬಳಸುವ ವಸ್ತುಗಳನ್ನು ಸಹ ದಾನಿಗಳಿಂದ ಸಂಗ್ರಹಿಸಿ ನೀಡಲಾಯಿತು.
ದಾನಿಗಳಾದ ಜಯವರ್ಧನ್ ಅವರಿಂದ ಆಹಾರ ಸಾಮಗ್ರಿ ಹಾಗೂ ಸೂರು ಬಳಗದಿಂದ ಅಜ್ಜಿಗೆ ಬೆಡ್ ಶೀಟ್, ಚಾಪೆ,ಹಾಗೂ ಬಟ್ಟೆ ನೀಡಲಾಯಿತು. ಲಾಕ್ಡೌನ್ ಸಮಯದಲ್ಲಿ ದುರ್ಬಲರಿಗೆ ಕಿಟ್ ನೀಡುವ ಸಮಯದಲ್ಲಿ ಸೂರು ತಂಡಕ್ಕೆ ಈ ಅಜ್ಜಿಯ ಮನೆಯ ಸಂಕಷ್ಟದ ಪರಿಸ್ಥಿತಿ ಗಮನಕ್ಕೆ ಬಂದು, ಏನಾದರೂ ಸಹಾಯ ಮಾಡಬೇಕು ಎಂಬ ನಿಟ್ಟಿನಲ್ಲಿ ಈ ತಂಡವು ಒಗ್ಗೂಡಿ ಈ ಕಾರ್ಯ ಮಾಡಿದೆ.
ತನ್ನವರೇ ದೂರ ದೂಡಿದ ಸಂದರ್ಭದಲ್ಲಿ ಅನಾಮಿಕರ ಈ ಮಾನವೀಯ ಸಹಾಯವನ್ನು ನೋಡಿದ ಅಜ್ಜಿಯ ಮುಖದಲ್ಲಿ ಆನಂದ ಬಾಷ್ಪ ಕಂಡ ಸೂರು ಬಳಗದ ಸ್ವಯಂ ಸೇವಕರು ತಮ್ಮ ನಿಸ್ವಾರ್ಥ ಪರ ಈ ಕಾರ್ಯಕ್ಕೆ ಸಂತೃಪ್ತಿ ಪಟ್ಟರು .ಈ ಕಾರ್ಯಕ್ರಮದಲ್ಲಿ ಸೂರು ಬಳಗದ ಸಂತೋಷ್ ಕೋಟ್ಯಾನ್, ರಾಜೇಶ್ ಕಲ್ದೊಡ್ಡಿ, ಸೀತಾರಾಮ್ ಭರಣ್ಯ, ಸುಮಂತ್ ನೆಮ್ಮಾರ್ ,ಮಣಿ ,ನವೀನ್, ಶ್ರವಣ, ಕೃಷ್ಣ, ಶಾಮ, ಕಿಶೋರ್, ಕಲ್ದೊಡ್ಡಿ ಶಾಂತಿನಗರ ಗ್ರಾಮಸ್ಥರು ಇದ್ದರು ಹಾಗೆಯೇ ಹಿಂದೂ ಮಹಾಗಣಪತಿ ಸೇವಾ ಸಮಿತಿ ಇಂದಲೂ ಸಹಕಾರ ನೀಡಿದರು.


0 Comments