ಶೃಂಗೇರಿ ಪಟ್ಟಣದಲ್ಲಿರುವ ಜ್ಯೋತಿ ಹೋಮಿಯೋ ಕ್ಲಿನಿಕ್ ಮತ್ತು ಜ್ಯೋತಿ ಕ್ಲಿನಿಕಲ್ ಲ್ಯಾಬೋರೇಟರಿ ಹೆಸರಿನಲ್ಲಿ ಸರಿಸುಮಾರು 21 ವರ್ಷಗಳಿಂದ ಶೃಂಗೇರಿಯ ಜನರ ಸೇವೆ ಸಲ್ಲಿಸುತ್ತಿರುವ ಜನಪ್ರಿಯ ವೈದ್ಯರಾದ ಡಾ. ಅಣ್ಣಾದೊರೆ ಕೆ.ಸಿ. ಅವರು ಕೊರೋನಾ ಸಂಧರ್ಭದಲ್ಲಿ ಆದಾಯವಿಲ್ಲದೇ ಸಂಕಷ್ಟದಲ್ಲಿರುವ ಆಟೋಚಾಲಕರುಗಳ ಸಹಾಯಕ್ಕೆ ಮುಂದಾಗಿದ್ದು ಆಟೋ ಚಾಲಕರ ಸಂಘಕ್ಕೆ ಸುಮಾರು 1.05ಲಕ್ಷ (ಒಂದು ಲಕ್ಷದ ಐದು ಸಾವಿರ) ರೂ.ಗಳನ್ನು ಸಹಾಯಧನವಾಗಿ ನೀಡಿ ಆಟೋ ಚಾಲಕರ ಸಂಕಷ್ಟಕ್ಕೆ ನೆರವಾಗಿದ್ದಾರೆ. ಈ ಸಹಾಯ ನಿಧಿಯನ್ನು ಆಟೋಚಾಲಕರ ಆರೋಗ್ಯ ನಿಧಿಯ ಅದ್ಯಕ್ಷರಾದ ಬಿ.ಜಿ. ಚಂದ್ರಶೇಖರ, ಕಾರ್ಯದರ್ಶಿಗಳಾದ ರಂಗಸ್ವಾಮಿ ಕಾಂಚಿನಗರ ಹಾಗೂ ಆಟೋ ಚಾಲಕರ ಸಂಘದ ಕಾರ್ಯದರ್ಶಿಗಳಾದ ಸುಬ್ರಮಣ್ಯ ಮತ್ತು ಹೊನ್ನವಳ್ಳಿ ಶ್ರೀನಿವಾಸ್ ಮತ್ತಿತರರ ಮೂಲಕ ಆಟೋಚಾಲಕರಿಗೆ ಹಸ್ತಾಂತರಿಸಿದರು.
ಈ ಕುರಿತು ಅಣ್ಣಾದೊರೆಯವರು ಮಾತನಾಡಿ "ಇವರು ಚಾಲಕರಲ್ಲ ಗ್ರಾಮೀಣ ಜನರ ನಿತ್ಯ ಸೇವಕರು" ಹಗಲಿರುಳು ಎನ್ನದೆ ಗ್ರಾಮೀಣ ಜನರ ತುರ್ತು ಅಗತ್ಯಗಳಿಗೆ ಮಾನವೀಯತೆಯಿಂದ ಸ್ಪಂದಿಸುವ ಆಟೋಚಾಲಕರ ಸೇವೆ ಅತೀತವಾದುದು, ಇಂದಿನ ಕಾಲದಲ್ಲಿ ಸ್ವಂತ ಹೆತ್ತ ಮಕ್ಕಳೆ ವೃದ್ದ ತಂದೆ ತಾಯಿಗಳನ್ನು ನೋಡಿಕೊಳ್ಳದ ಸ್ಥಿತಿಯಲ್ಲಿರುವಾಗ ಈ ಆಟೋ ಚಾಲಕರು ತಮ್ಮ ಸ್ವಂತ ಕುಟುಂಬದವರಂತೆ ಕರೆ ತಂದು ಔಷದೋಪಚಾರ ಹಾಗೂ ಇತರ ಅಗತ್ಯಗಳನ್ನು ಪೂರೈಸಿದ ಜನಸೇವಕರಾಗಿದ್ದಾರೆ, ಈ ಕೊರೋನಾ ಸಂದರ್ಭದಲ್ಲಿ ಅವರುಗಳ ಅಗತ್ಯತೆಯನ್ನು ಮನಗಂಡು ಚಿಕ್ಕ ಕಾಣಿಕೆಯನ್ನು ಕೊಡುತ್ತಿರುವುದಾಗಿ ಹೇಳಿದರು.


0 Comments