ಇಂದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರೀಗದ್ದೆ ಆಶ್ರಮದ ಅವಧೂತ ವಿನಯ್ ಗುರೂಜಿ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಎರಡು ಪ್ರಮುಖ ವಿಷಯಗಳ ಕುರಿತು ಚರ್ಚಿಸಿ ಬೇಡಿಕೆಯನ್ನಿಟ್ಟಿದ್ದಾರೆ.
ಎಲ್ಲೆಡೆ ಅಂತರ್ಜಲ ಮಟ್ಟ ಕುಸಿಯುತ್ತಿದ್ದು, ಮಲೆನಾಡೂ ಇದಕ್ಕೆ ಹೊರತಾಗಿಲ್ಲ. ಎಲ್ಲೆಡೆ ಬಾವಿ ಜಾಗದಲ್ಲಿ ಬೋರ್ ಬಂದಿದೆ, ನೀಲಗಿರಿ ಹಾಗೂ ಅಕೇಶಿಯಾ ಪ್ಲಾಂಟೇಶನ್ ಗಳಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ. ಆ ಜಾಗಗಳಲ್ಲಿ ಹಣ್ಣಿನ ಗಿಡಗಳನ್ನು ನೆಡಬೇಕು ಅದರಿಂದ ಪಶು ಪಕ್ಷಿಗಳಿಗೆ ಆಹಾರ ಸಿಗುವುದಲ್ಲದೇ ಅಂತರ್ಜಲ ಮಟ್ಟವೂ ಏರುತ್ತದೆ ಎಂದರು.
ಹಾಗೆಯೇ ಎಲ್ಲೆಡೆ ಕೊರೋನಾ ಮೂರನೇ ಅಲೆ ಬರುತ್ತಿದ್ದು ಇದಕ್ಕಾಗಿ ತಯಾರಿ ಆಗಬೇಕಿದೆ. ಕೊಪ್ಪ ತಾಲೂಕು ಆಸ್ಪತ್ರೆ, ಬಾಳೆಹೊನ್ನೂರು ಆಸ್ಪತ್ರೆಯನ್ನು ಹಾಗೂ ತಾಲೂಕು ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಿದಲ್ಲಿ ಜನರಿಗೆ ಬಹಳಷ್ಟು ಸಹಕಾರ ಆಗುತ್ತದೆ.
ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ತೆರಳಬೇಕಾಗಿದ್ದು ಅದಕ್ಕಾಗಿ ಒಂದೂವರೆ ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಈ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕು ಅದರಿಂದ ಜನರ ಪ್ರಾಣ ಉಳಿಯುತ್ತದೆ ಎಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿರುವುದಾಗಿ ತಿಳಿಸಿದರು.


0 Comments