ಶೃಂಗೇರಿ: ಕೊರೋನಾ ಸೋಂಕಿಗೆ ಕಾಫಿನಾಡು ಚಿಕ್ಕಮಗಳೂರಿನ ಶೃಂಗೇರಿಯ 2 ವರ್ಷದ ಮಗು ಸಾವನ್ನಪ್ಪಿದೆ.
ಜಿಲ್ಲೆಯಲ್ಲಿ ಕೊರೊನಾಗೆ ಮಗು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಗುವೊಂದು ಕೊರೊನಾಗೆ ಸಾವನ್ನಪ್ಪಿದ್ದು, ಮೃತ ಮಗು ಕಿಗ್ಗಾ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರ ಮಗುವಾಗಿದೆ.
ಮಗುವಿಗೆ ಕಳೆದ ಒಂದು ವಾರದಿಂದ ತೀವ್ರವಾದ ಕಫ ಸಮಸ್ಯೆ ಕಾಡುತ್ತಿತ್ತು. ಮಗುವನ್ನು ಇದೇ ಕಳೆದ ವಾರ ಮಣಿಪಾಲ್‍ನ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಕಳೆದ ನಾಲ್ಕು ದಿನದಿಂದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಮಗುವು ಕೊನೆಯುಸಿರೆಳೆದಿದೆ. ಕಫದ ಸಮಸ್ಯೆ ಮಾತ್ರ ಇದ್ದಿದ್ದು ನಾಲ್ಕು ದಿನದ ಚಿಕಿತ್ಸೆಯ ಬಳಿಕವೂ ಮಗು ಸಾವನ್ನಪ್ಪಿರುವುದು ಜಿಲ್ಲೆಯ ಜನರಲ್ಲಿ ಆತಂಕ ತಂದಿದೆ.


0 Comments