ಶೃಂಗೇರಿಯ ಜ್ಞಾನಭಾರತಿ ವಿದ್ಯಾಕೇಂದ್ರ ಮಾನಗಾರು ಇಲ್ಲಿ ಎಫ್ ಕೆ ಸಿ ಸಿ ಐ ನ ಮಾಜಿ ಅಧ್ಯಕ್ಷರು ಹಾಗೂ ಅಮ್ಮ ಫೌಂಡೇಶನ್ ನ ಸಂಸ್ಥಾಪಕ ಅಧ್ಯಕ್ಷರೂ ಆದ ಸುಧಾಕರ್ ಎಸ್ ಶೆಟ್ಟಿ ಅವರು ಅನುದಾನರಹಿತ ಖಾಸಗಿ  ಶಾಲೆಯ ಶಿಕ್ಷಕರಿಗೆ, ಎರಡನೇ ಹಂತದಲ್ಲಿ ಆಹಾರದ ಕಿಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ನ ಅಧ್ಯಕ್ಷರಾದ ಹರೀಶ್ ವಿ ಶೆಟ್ಟಿ ಹಾಗೂ ಜ್ಞಾನಭಾರತಿ ಶಾಲೆಯ ಕಾರ್ಯದರ್ಶಿಗಳಾದ ಸತೀಶ್ ಜಿ.ಎಂ ಅವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಸುಧಾಕರ್ ಎಸ್ ಶೆಟ್ಟಿ ಅವರು ಮಲೆನಾಡಿನ ಭಾಗದಲ್ಲಿ ನೆಟ್ವರ್ಕ್ ಸಮಸ್ಯೆಯು ಹೆಚ್ಚಿದೆ,ಈ ಕುರಿತು ಸರ್ಕಾರವು ಗಮನ ಹರಿಸಬೇಕು ಎಂದರು, ಸಾವಿರದ ಐನೂರಕ್ಕೂ ಅಧಿಕ ಟ್ಯಾಬ್ ಗಳನ್ನು ಈ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತವಾಗಿ ವಿತರಿಸುತ್ತಿದೆ ಆದರೆ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮುಖ್ಯವಾಗಿ ಬೇಕಾದ ಇಂಟರ್ನೆಟ್ ನ ಕೊರತೆ ನಮ್ಮ ಮಲೆನಾಡಿನ ಭಾಗದಲ್ಲಿ ಹೆಚ್ಚಿದೆ. ಈ ಕುರಿತು ಗಮನ ಹರಿಸುವಂತೆ ಶಿಕ್ಷಣ ಸಚಿವರು ಹಾಗೂ ಉಪಮುಖ್ಯಂತ್ರಿಗಳಾದ ಡಾ. ಅಶ್ವತ್ಥ್ ನಾರಾಯಣ್ ಅವರ ಗಮನಕ್ಕೆ ತಂದಿದ್ದೇನೆ ಎಂದರು. ವಿದ್ಯುತ್ ಹಾಗೂ ಇಂಟರ್ನೆಟ್ ಮಲೆನಾಡು ಭಾಗದ ಮುಖ್ಯ ಸಮಸ್ಯೆಯಾಗಿದ್ದು  ಆದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ನಂತರ ಖಾಸಗೀ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಕುರಿತು ಮಾತನಾಡಿದ ಸುಧಾಕರ್ ಶೆಟ್ಟಿಯವರು  ಏರಡು ವರ್ಷಗಳ ಲಾಕ್ ಡೌನ್ ಅವಧಿಯಲ್ಲಿ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಸರಿಯಾಗಿ ಅವರ ಖಾತೆಗೆ ಪೂರ್ಣ ಪ್ರಮಾಣದ ವೇತನ ಸಹ ಬಾರದೆ ಕಠಿಣ  ಪರಿಸ್ಥಿತಿ ಯನ್ನು ಎದುರಿಸುತ್ತಿದ್ದಾರೆ ಎಂದರು, ಅವರೆಲ್ಲರ ಧ್ವನಿಯಾಗಿ ನಾನು ನಿಲ್ಲುತ್ತೇನೆ ಎಂದು ಶಿಕ್ಷಕರನ್ನು ಸಾಂತ್ವಾನಿಸಿದರು. ಹಾಗೂ ಶಿಕ್ಷಕರಿಗೆ ಕಿವಿ ಮಾತನ್ನು ಹೇಳಿದ ಅವರು ಎಲ್ಲಿಯವರೆಗೆ ಶಿಕ್ಷಕರು ಧ್ವನಿ ಎತ್ತುವುದಿಲ್ಲವೋ ಅಲ್ಲಿಯವರೆಗೆ ಸಮಸ್ಯೆಗಳು ಬಗೆಹರಿಯುವುದಿಲ್ಲ ಎಂಬ ಮಾತನ್ನು ಹೇಳಿದರು. ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಖಾಸಗೀ ಶಾಲೆಗಳಲ್ಲಿಯೂ ಇದ್ದಾರೆ. ಈ ಕೂಡಲೇ ಸರ್ಕಾರ ಖಾಸಗೀ ಶಾಲೆಗಳ ಶಿಕ್ಷಕರ ಬಗ್ಗೆ ಗಮನ ಹರಿಸಬೇಕೆಂದರು.