ಪ್ರಕೃತಿ ಸೌಂದರ್ಯವನ್ನು ಸವಿಯಲು,ಆನಂದಿಸಲು,ಒಂದು ಸುಂದರ ಅನುಭವವನ್ನು ಪಡೆಯಲು ಇರುವ ನೈಸರ್ಗಿಕ ತಾಣವೇ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್. ಇದು ಚಿಕ್ಕಮಗಳೂರು ಹಾಗೂ ದಕ್ಷಿಣಕನ್ನಡ ಜಿಲ್ಲೆಯ ಸಂಪರ್ಕ ಸೇತುವೆಯಾಗಿದೆ. ಮಳೆಗಾಲದಲ್ಲಿ ಈ ಘಾಟಿಯ ಸೊಬಗನ್ನು ಎಷ್ಟು ವರ್ಣಿಸಿದರೂ ಮುಗಿಯದು, ಅಲ್ಲಲ್ಲಿ ಧುಮ್ಮಿಕ್ಕುವ ಜಲಪಾತಗಳ ನಯನ ಮನೋಹರ ದೃಶ್ಯವಂತೂ ಮನಸ್ಸಿಗೆ ಅತ್ಯಂತ ಖುಷಿ ನೀಡುತ್ತದೆ, ಹಚ್ಚ ಹಸಿರಿನಿಂದ ಕಂಗೊಳಿಸುವ ಸುತ್ತಲಿನ ಪರಿಸರ, ತಿಳಿನೀಲಿ ಬಣ್ಣದ ಆಕಾಶ, ಈ ಮನಮೋಹಕ ಕ್ಷಣಗಳನ್ನು ಆನಂದಿಸಲು ಮನಸ್ಸು ಸದಾಕಾಲ ಹಾತೊರೆಯುತ್ತದೆ.

ಉತ್ತಮ ಆರೋಗ್ಯಕ್ಕೆ ಪ್ರಕೃತಿಯೂ ಸಹಕಾರಿ. ಈಗಿನ ದಿನಗಳಲ್ಲಿ ಪ್ರಕೃತಿಯ ಸ್ವಾಭಾವಿಕ ಸೊಬಗು ಸಿಗುವುದು ತುಂಬಾ ಅಪರೂಪ, ಹೀಗಿರುವಾಗ ಒಮ್ಮೆ ಚಾರ್ಮಾಡಿ ಘಾಟಿಯ ಸೊಬಗನ್ನು ಆನಂದಿಸಿ, ನಿಮ್ಮ ಪ್ರಕೃತಿಯೊಂದಿಗಿನ ಅನುಭವವನ್ನು  ಆತ್ಮೀಯರೊಂದಿಗೆ ಹಂಚಿಕೊಳ್ಳಿ,

ಉತ್ತರ ಕರ್ನಾಟಕದಿಂದ ಮೂಡಿಗೆರೆ ಮೂಲಕ ಧರ್ಮಸ್ಥಳಕ್ಕೆ ಬರುವ ಪ್ರವಾಸಿಗರು ಚಾರ್ಮಾಡಿ ಘಾಟಿಯ ಹಸಿರಿನ ಸೊಬಗು, ಜಲ‍ಪಾತ ನೋಡಿ ದಂಗಾಗುತ್ತಾರೆ. ಪ್ರವಾಸಿಗರು ಘಾಟಿಯ ತಿರುವುಗಳಲ್ಲಿ ನಿರ್ಮಿಸಿರುವ ತಡೆಗೋಡೆ ಹತ್ತಿ ಸೆಲ್ಫಿ ತೆಗೆಯುವು‌‌ದಕ್ಕೆ, ಜಲಪಾತದ ಸಮೀಪ ಹೋಗುವುದಕ್ಕೆ ನಿಷೇಧವಿದೆ. ಪೊಲೀಸರು ಗಸ್ತು ತಿರುಗುತ್ತಿರುತ್ತಾರೆ.