ಬಿರುವೆರ್ ಕುಡ್ಲ ನೇತೃತ್ವದಲ್ಲಿ ಬಿಲ್ಲವ ಸಂಘ ಸಹಕಾರದೊಂದಿಗೆ  ಬಿಲ್ಲವ ಸಮುದಾಯದ ಬಡಕುಟುಂಬಗಳಿಗೆ ಇಂದು ಆಹಾರದ ಕಿಟ್ ನೀಡಲಾಯಿತು.

ಕೊರೋನಾ ಎರಡನೇ ಅಲೆಬಂದು ಲಾಕ್ ಡೌನ್ ಘೋಷಣೆಯಾಗಿ ಸಾಮಾನ್ಯ ಜನರ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಜೀವನ ನಡೆಸುವುದು ತುಂಬಾ  ಕಷ್ಟಕರವಾಗಿದೆ, ಅದರಲ್ಲೂ ಬಿಲ್ಲವ ಸಮುದಾಯದಲ್ಲಿ ದಿನಗೂಲಿ ಕೆಲಸ ಮಾಡಿ ಜೀವನ ನಿರ್ವಹಣೆ ಮಾಡುವವರ ಸಂಖ್ಯೆ ಅಧಿಕವಾಗಿದ್ದು, ಲಾಕ್ಡೌನ್ ಇರುವ ಕಾರಣ ಎಲ್ಲರೂ ದುಡಿಮೆಯಿಲ್ಲದೆ ಮನೆಯಲ್ಲಿಯೇ ಇದ್ದಾರೆ.

ಹಾಗಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕುಲ ಬಾಂಧವರಿಗೆ   ಬಿಲ್ಲವ ಸಮಾಜದ ಹಿರಿಯರ ಜೊತೆ ಚರ್ಚಿಸಿ ನಮ್ಮ ಸಮುದಾಯದ ಕಷ್ಟದಲ್ಲಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಆಸರೆ ಎಂಬ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. ಅದರ ಪ್ರಾರಂಭಿಕ ಹಂತವಾಗಿ ಇಂದು ನಗರದ ವಿಜಯಪುರ ಮುಖ್ಯರಸ್ತೆಯಲ್ಲಿ ಯೋಜನೆಗೆ ಚಾಲನೆ ನೀಡಲಾಯಿತು ಈ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 15 ದಿನಕ್ಕೆ ಬೇಕಾಗುವ ಅಗತ್ಯ ದಿನಸಿ ವಸ್ತುಗಳು ಹಾಗೂ ಮಾಸ್ಕ್ ನೀಡಲಾಗಿದೆ. ಈ ದಿನಸಿ ಕಿಟ್ಟಿಗೆ ತಗಲುವ ಹಣದ ವೆಚ್ಚವನ್ನು ಬಿಲ್ಲವ ಸಮಾಜದ ದಾನಿಗಳಿಂದ ಸಂಗ್ರಹಿಸಲಾಗಿದೆ.

ಶ್ರೀ ನಾರಾಯಣ ಗುರುಗಳ ಆಶೀರ್ವಾದದೊಂದಿಗೆ,  ಕಷ್ಟದಲ್ಲಿರುವವರಿಗೆ ನೆರವಾಗಬೇಕು ಎಂಬ ಗುರುಗಳ ಸಂದೇಶದಂತೆ ಈ ಕಾರ್ಯವನ್ನು ಮಾಡುತ್ತಿದ್ದೇವೆ ಎಂದು ಬಿರುವೇರ್ ಕುಡ್ಲ ಸಂಘದ ಚಿಕ್ಕಮಗಳೂರು ಘಟಕದ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್ ಹೇಳಿದರು.

ಈ ಸಂದರ್ಭದಲ್ಲಿ ನಿವೃತ್ತ ಉಪ ತಹಶೀಲ್ದಾರ್ ರತ್ನಾಕರ್ , ಗುಣಶೇಖರ್, ಸುರೇಶ್, ಸಂಘಟನೆಯ ಪ್ರವೀಣ್ ಪೂಜಾರಿ, ಸಂಜಿತ್ ಸುವರ್ಣ ಶಯನ್ , ಮಿಥುನ್ , ಮಂಜುನಾಥ್ ಲಕ್ಷ್ಮಣ್ UT ,ಉಮೇಶ್ ,ಪ್ರದೀಪ್ , ಸುಜಯ್ , ಕಿರಣ್ ಮುಂತಾದವರು ಪಾಲ್ಗೊಂಡಿದ್ದರು