ಕಳೆದ ವರ್ಷದಿಂದ ಕೊರೋನಾ ದಿಂದ ತತ್ತರಿಸಿರುವ ಭಾಗಗಳಲ್ಲಿ ಮಲೆನಾಡು ಸಹ ಒಂದು. ಮಲೆನಾಡಿನ ಹಳ್ಳಿಗಾಡಿನ ಜನರ ಆರ್ಥಿಕ ಪರಿಸ್ಥಿತಿ ಸಹ ತೀರಾ ಹದಗೆಟ್ಟಿದೆ ಇಂತಹ ಸಂದರ್ಭದಲ್ಲಿ ಸಮರ್ಪಣಾ ಟ್ರಸ್ಟ್ ಸದ್ಧಿಲ್ಲದೇ ಮಲೆನಾಡಿನ ಕುಗ್ರಾಮಗಳಿಗೆ ತಲುಪುವ ಮೂಲಕ ಜನರ ಸಂಕಷ್ಟಗಳಿಗೆ ಹೆಗಲಾಗುತ್ತಿದೆ.
ಈ ತಂಡವು ಕಳೆದ ಕೆಲವು ದಿನಗಳಿಂದ ಕಳಸ, ಜಯಪುರ, ಬಾಳೆಹೊನ್ನೂರು, ಮೂಡಿಗೆರೆ ಹಾಗೂ ಕೊಪ್ಪದ ಹಳ್ಳಿ ಭಾಗಗಳಿಗೆ ಭೇಟಿ ನೀಡಿ ಮನೆಗೆ ಅಗತ್ಯ ಆಹಾರ ಸಾಮಾಗ್ರಿಗಳ ಜೊತೆಗೆ ಬಟ್ಟೆ ಹಾಗೂ ಮಾಸ್ಕ್, ಸ್ಯಾನಿಟೈಸರ್ ನೀಡುತ್ತಾ ಬಂದಿದ್ದಾರೆ. ನೆನ್ನೆ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದ ನಕ್ಸಲ್ ಪೀಡಿತ ಪ್ರದೇಶಗಳು ಹಾಗೂ ಕಿಗ್ಗಾ ಭಾಗದ ಪ್ರದೇಶಗಳಿಗೆ ಭೇಟಿ ನೀಡಿ ಬಡ ಕುಟುಂಬಗಳನ್ನು ಗುರುತಿಸಿ ಅತ್ಯಗತ್ಯ ಸಾಮಾಗ್ರಿಗಳನ್ನು ನೀಡಿದರು.
ಟ್ರಸ್ಟ್ ನ ವತಿಯಿಂದ ದಿನಸಿ ಕಿಟ್ ಗಳು, ಮಹಿಳೆಯರು, ಮಕ್ಕಳು, ಹಾಗೂ ಅಂಗವಿಕಲರಿಗೆ ಬಟ್ಟೆ ಸಹ ನೀಡುತ್ತಿದ್ದಾರೆ. ಈ ಹಿಂದೆ ನಕ್ಸಲ್ ಪೀಡಿತ ಪ್ರದೇಶಗಳ ಪಟ್ಟಿಯಲ್ದಿದ್ದ ಕೊಪ್ಪದ ಮೆಣಸಿನಹಾಡ್ಯ, ಶೃಂಗೇರಿಯ ಕೆರೆಕಟ್ಟೆ ಸಮೀಪದ ಕೆಲವು ಕುಗ್ರಾಮಗಳಿಗೆ ಸಹ ಭೇಟಿ ಅಗತ್ಯ ಸಾಮಾಗ್ರಿಗಳನ್ನು ಹಂಚುವ ಮೂಲಕ ಜನರ ನೋವಿಗೆ ಸ್ಪಂದಿಸಿದೆ.
ಹಾಗೆಯೇ ಶೃಂಗೇರಿಯ ಸರ್ಕಾರಿ ಆಸ್ಪತ್ರೆಗೆ ತೆರಳಿ ಅವಶ್ಯಕವಾದಂತಹ ಪಿಪಿಇ ಕಿಟ್, ಫೇಸ್ ಶೀಲ್ಡ್, ಹಾಗೂ ಮಾಸ್ಕ್ ವಿತರಿಸಿ ನಂತರ ಶೃಂಗೇರಿಯ ಆರಕ್ಷಕ ಠಾಣೆಗೆ ತೆರಳಿ ಹೋಂಗಾರ್ಡ್ ಗಳಿಗೆ ಸ್ಯಾನಿಟೈಸರ್, ಫೇಸ್ ಶೀಲ್ಡ್, ಹಾಗೂ ಮಾಸ್ಕನ್ನು ನೀಡಿದರು.
ಈ ಕಾರ್ಯಕ್ಕೆ ಕೊನೆಯವರೆಗೂ ಎಎನ್ ಎಫ್ (ANF) ಸಬ್ ಇನ್ಸ್ಪೆಕ್ಟರ್ ಕೀರ್ತಿ ಕುಮಾರ್, ಸಿಬ್ಬಂದಿಗಳು ಹಾಗೂ ಪೊಲೀಸರು ಸಹ ಸಾಥ್ ನೀಡಿದರು.
ಸಮರ್ಪಣಾವು ಹಳ್ಳಿಭಾಗಗಳಲ್ಲಿ ಓದಲು ಸಾಧ್ಯವಾಗದ ಹಲವು ಬಡ ಮಕ್ಕಳನ್ನು ಗುರುತಿಸಿ ಉತ್ತಮ ಶಾಲೆ ಹಾಗೂ ಕಾಲೇಜುಗಳಿಗೆ ಸೇರಿಸಿ ವಿದ್ಯಾಭ್ಯಾಸ ಸಹ ನೀಡುತ್ತಿದೆ.
ಈ ಸಂದರ್ಭದಲ್ಲಿ ಸಮರ್ಪಣಾ ತಂಡದ ಸದಸ್ಯರಾದ ದೀಪ ಶೆಟ್ಟಿ, ಸತೀಶ್ ಜೈನ್, ವಿಜಯ್ ನಾಗೇಶ್, ಅನಿಲ್, ಸಂದೀಪ್ ಶೆಟ್ಟಿ, ಪ್ರತೀಕ್, ಸ್ಟೀಫನ್,ರೋಹನ್ ಶೆಟ್ಟಿ, ರಂಜಿತ್ ಶೃಂಗೇರಿ, ಸ್ವಸ್ತಿಕ್ ಶೆಟ್ಟಿ, ಅಖಿಲ್ ಶೆಟ್ಟಿ, ಅನಿಷ್ ಶೆಟ್ಟಿ ಇದ್ದರು





0 Comments