ಹಾಸನ: ನಿಧಿ ಆಸೆಗಾಗಿ ಪುರಾತನ ಕಾಲದ ದೇವಾಲಯದ ಗರ್ಭಗುಡಿ ಬಗೆದ ಚೋರರನ್ನ ಪೊಲೀಸರು ಬಂಧಿಸಿದ್ದಾರೆ,. ಹಾಸನ ಜಿಲ್ಲೆ ಆಲೂರು ತಾಲೂಕಿನ ಹೊಸಕೋಟೆ ಸಮೀಪದ ಪಾರ್ವತಮ್ಮನವರ ಬೆಟ್ಟದಲ್ಲಿ ಕಿಡಿಗೇಡಿಗಳು ನಿಧಿಗಾಗಿ ದೇವಾಲಯದ ಗರ್ಭಗುಡಿಯನ್ನು ಅಗೆದಿದ್ದರು. ದೇವಸ್ಥಾನದ ಆಡಳಿತ ಮಂಡಳಿಯು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಕಾರ್ಯಾಚರಣೆಗೆ ಧಾವಿಸಿದ್ದು, ಹಾಸನ ಸಹಕಾರಿ ಸಂಘಗಳ ಸಹಾಯಕ ಉಪ ನಿಬಂಧಕ ನಾರಾಯಣ್, ಅರ್ಚಕ ತಿಪ್ಪೇಸ್ವಾಮಿ ಜ್ಯೋತಿಷಿ ಮಂಜುನಾಥ್ ಸೇರಿ ಒಟ್ಟು ಏಳು ಜನರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಈ ಕೃತ್ಯದಲ್ಲಿ ಚನ್ನರಾಯಪಟ್ಟಣ ಮೂಲದ ನಾಲ್ಕು ಜನರು ಭಾಗಿಯಾಗಿದ್ದಾರೆ. ಮುಂದಿನ ತನಿಖೆಯು ಆದಷ್ಟು ಬೇಗ ನಡೆಯಲಿದ್ದು ಅಪರಾಧಿಗಳಿಗೆ ತಕ್ಕ ಶಿಕ್ಷೆಯಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


0 Comments