ಚಿಕ್ಕಮಗಳೂರು : ಜಿಲ್ಲೆಯಲ್ಲಿ ಪೊಲೀಸ್ ದೂರುಗಳ ಪ್ರಾಧಿಕಾರವು ರಚನೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾರ್ವಜನಿಕರು ಡಿ.ವೈ.ಎಸ್.ಪಿ ಮತ್ತು ಕೆಳಗಿನ ಹಂತದ ಪೊಲೀಸ್ ಅಧಿಕಾರಿಗಳು ಕರ್ತವ್ಯದ ಸಂದರ್ಭ ತಪ್ಪು ಮಾಡಿದ್ದಲ್ಲಿ ದೂರು ಸಲ್ಲಿಸುವುದಕ್ಕೆ ಪೊಲೀಸ್ ದೂರುಗಳ ಪ್ರಾಧಿಕಾರ ರಚಿಸಲಾಗಿದೆ.
ಪ್ರಾಧಿಕಾರದ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ರಮೇಶ್ ಅವರು, ಸದಸ್ಯ ಕಾರ್ಯದರ್ಶಿಯಾಗಿ ಚಿಕ್ಕಮಗಳೂರಿನ ಪೊಲೀಸ್ ಅಧೀಕ್ಷಕರು ಅಕ್ಷಯ್, ಸದಸ್ಯರನ್ನಾಗಿ ನಾಗರಿಕ ಸೇವೆಯ ಅಧಿಕಾರಿ ಎಸ್. ಆರ್. ವೆಂಕಟೇಶ್ ಹಾಗೂ ನಾಗರಿಕ ಸಮಾಜದಿಂದ ನರೇಂದ್ರ ಪೈ ಅವರನ್ನು ನೇಮಕ ಮಾಡಲಾಗಿದೆ.
ಸಾರ್ವಜನಿಕರು ದೂರುಗಳಿದ್ದಲ್ಲಿ ದೂ.ಸಂ. 080262 230401, ಫ್ಯಾಕ್ಸ್: 08265 230540, 235608 ಇ-ಮೇಲ್ ವಿಳಾಸ dpcackm@karnataka.gov.in ವೆಬ್‌ಸೈಟ್ www.karnataka.gov.in/spca ಹಾಗೂ ಅಡಿಷನಲ್ ಎಸ್.ಪಿ ಮತ್ತು ಮೇಲಿನ ಹುದ್ದೆಯ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸುವಂತಿದ್ದಲ್ಲಿ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ, ಕೊಠಡಿ ಸಂ. 36, ನೆಲಮಹಡಿ, ವಿಕಾಸಸೌಧ, ಬೆಂಗಳೂರು- 01, ದೂರವಾಣಿ ಸಂಖ್ಯೆ 080 22386063, 080 22034220 ಇವರಿಗೆ ದೂರು ನೀಡಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


0 Comments