ಚಿಕ್ಕಮಗಳೂರು: ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ನಲ್ಲಿ ಚಿಕ್ಕಮಗಳೂರು ಜಿಲ್ಲೆಯು ಶೇಕಡಾ 24.20 ರಷ್ಟು ಪಾಸಿಟಿವಿಟಿ ರೇಟ್ನೊಂದಿಗೆ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ.
ಇನ್ನು ಮೈಸೂರು ಜಿಲ್ಲೆಯು ಮೊದಲನೇ ಸ್ಥಾನದಲ್ಲಿದ್ದು ಶೇಕಡಾ 30.23ರಷ್ಟು ಪಾಸಿಟಿವಿಟಿ ರೇಟ್ ಮೂಲಕ ರಾಜ್ಯದಲ್ಲೇ ಹೆಚ್ಚು ಪಾಸಿಟಿವಿಟಿ ರೇಟ್ ಹೊಂದಿದ ಜಿಲ್ಲೆಯಾಗಿದೆ. ಇನ್ನುಳಿದಂತೆ ಚಿತ್ರದುರ್ಗವು ಮೂರನೇ ಸ್ಥಾನದಲ್ಲಿ ಶೇಕಡ 19.71ರಷ್ಟು ಪಾಸಿಟಿವಿಟಿ ರೇಟ್ ಹೊಂದಿರೋ ಜಿಲ್ಲೆಯಾಗಿದ್ದು. ಬೀದರ್ ಜಿಲ್ಲೆಯು ಕೊನೆಯ ಸ್ಥಾನದಲ್ಲಿದ್ದು ಪಾಸಿಟಿವಿಟಿ ರೇಟ್ ಕೇವಲ ಶೇಕಡ 0.85ರಷ್ಟಿದೆ.
ಇದು 7 ದಿನಗಳ ಪಾಸಿಟಿವಿಟಿ ರೇಟ್ನ ಚಿತ್ರಣವಾಗಿದ್ದು, ರಾಜ್ಯದ ಸರಾಸರಿ ಪಾಸಿಟಿವಿಟಿ ರೇಟ್ ಶೇಕಡ 11.21%ರಷ್ಟಿದೆ. ಪಾಸಿಟಿವಿಟಿ ರೇಟ್ ಅನ್ನು ದಿನದಲ್ಲಿ ಒಟ್ಟು ಪಡೆದ ಸ್ಯಾಂಪಲ್ ಗಳಲ್ಲಿ ನೂರಕ್ಕೆ ಎಷ್ಟು ಪಾಸಿಟಿವ್ ರಿಪೋರ್ಟ್ ಬರುತ್ತಿದೆ ಎಂಬ ಆಧಾರದ ಮೇಲೆ ನಿರ್ಧಾರ ಮಾಡಲಾಗುತ್ತದೆ.


0 Comments