ಕೋವಿಡ್ ನಿಂದಾಗಿ ಮೃತಪಟ್ಟು, ಲಾಕ್ಡೌನ್ ನಿಯಮಗಳ ಕಾರಣ ಅಂತಿಮ ವಿಧಿವಿಧಾನ ಕ್ರಮಗಳನ್ನು ನಡೆಸಲಾಗದೆ ಇದ್ದಂತಹ ಚಿಕ್ಕಮಗಳೂರು ಜಿಲ್ಲೆಯ ನಾನಾ ಊರಿನ ಸುಮಾರು 46 ಮೃತರ ಅಸ್ಥಿಗಳನ್ನು ಇಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ವತಿಯಿಂದ ಹಿಂದೂ ಧಾರ್ಮಿಕ ವಿಧಿ ವಿಧಾನಗಳಂತೆ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯದ ಪ್ರಸಿದ್ಧ ಶ್ರೀ ಮಾರ್ಕಂಡೇಶ್ವರ ದೇವಾಲಯದ ಬಳಿ ಭದ್ರಾ ನದಿಯಲ್ಲಿ ವಿಸರ್ಜಿಸಲಾಯಿತು.
ಈ ಸಂದರ್ಭದಲ್ಲಿ ಸಂಸದೆ ಶೋಭಾ ಕರಂದ್ಲಾಜೆ, ಚಿಕ್ಕಮಗಳೂರು ಶಾಸಕರಾದ ಸಿ.ಟಿ ರವಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್ ಜೀವರಾಜ್, ಬಿಜೆಪಿ ಜಿಲ್ಲಾಧ್ಯಕ್ಷರಾದ ಕಲ್ಮರುಡಪ್ಪ ಹಾಗೂ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಇದ್ದರು


0 Comments