ಲಕ್ಕವಳ್ಳಿ : ಕೊರೋನಾ ಎಂಬ ಮಹಾಮಾರಿ ಎಲ್ಲೆಡೆ ಸಾವು ನೋವುಗಳನ್ನು ಸೃಷ್ಟಿಸಿ ಜನರ ಜೀವನವನ್ನೇ ಅಸ್ಥವ್ಯಸ್ಥಗೊಳಿಸಿರುವ ಸಂದರ್ಭದಲ್ಲಿ ಕೆಲಸಕಾರ್ಯಗಳಿಲ್ಲದೆ ತೀವ್ರ ಸಂಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಆಹಾರ ಸಾಮಾಗ್ರಿ (ಕಿಟ್) ನೀಡಿ ಲಕ್ಕವಳ್ಳಿ ಪಿಎಸ್ಐ ರಘುನಾಥ್ ಅವರು ಈ ಮೂಲಕ ಸಮಾಜಕ್ಕೆ ಪೊಲೀಸ್ ಎಂದರೆ ಯಾರೋ ಎಂಬ ಭಾವನೆ ಬೇಡ, ಅವರೂ ನಮ್ಮವರೇ ಎಂಬ ಭಾವನೆ ಬರುವಂತೆ ಮಾಡಿದ್ದಾರೆ, ಈ ನಡೆಗೆ ಎಲ್ಲೆಡೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಪ್ಪ : ಇನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ. ಅಲ್ಲಿಗೆ ಭೇಟಿ ನೀಡಿದ ತಹಶೀಲ್ದಾರ್ ಪರಮೇಶ್, ಈಓ ನವೀನ್, ಡಿವೈಎಸ್ ಪಿ ರಾಜು, ವೃತ್ತ ನಿರೀಕ್ಷಕ ಗುರಾಣ್ಣಾ ಹೆಬ್ಬಾಳ್ ಹಾಗೂ ಕಂದಾಯ ನಿರೀಕ್ಷಕ ಸತೀಶ್ ತೆರಳಿದ್ದು, ವ್ಯವಸ್ಥೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ಕೊಪ್ಪ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ಗುರಾಣ್ಣಾ ಹೆಬ್ಬಾಳ್ ಅವರು ಐದು ಸಾವಿರು ರೂ. ದೇಣಿಗೆ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ, ಆರೋಗ್ಯ ಸಿಬ್ಬಂದಿಯ ಜೊತೆಗೆ ಪೊಲೀಸ್ ಇಲಾಖೆಯೂ ಶ್ರಮಿಸುತ್ತಿದೆ. ಕೊಪ್ಪ ವೃತ್ತ ನಿರೀಕ್ಷಕರ ಈ ಕಾರ್ಯಕ್ಕೆ ಜಿಲ್ಲೆಯಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.