ಕೊರೋನಾ ಕಾರಣದಿಂದ ಹಲವು ತಿಂಗಳುಗಳಿಂದ ಶಾಲೆಗಳು ಬಂದ್ ಆಗಿದ್ದು ವಿದ್ಯಾರ್ಥಿಗಳು ಮನೆಯಿಂದಲೆ ಆನ್ಲೈನ್ ಕ್ಲಾಸ್ ಮುಖಾಂತರ ಕಲಿಯುತ್ತಿದ್ದಾರೆ. ಬಹುತೇಕ ಮಕ್ಕಳು ಶಾಲೆಯನ್ನೇ ಮರೆತಿದ್ದಾರೆ.ಆದರೆ ಕೊರೋನಾ ನಿಯಂತ್ರಣದತ್ತ ಬಂದಿದ್ದು ಇನ್ನೇನು ಶಾಲೆಗಳು ಪುನರಾರಂಭವಾಗುವುದಿವೆ.

ಆದರೆ ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆಗಳ ಶುಚಿತ್ವ ಎಷ್ಟರಮಟ್ಟಿಗೆ ಹಾಳಾಗಿರಬಹುದು ಎಂಬುದು ಎಲ್ಲರ ಆಲೋಚನೆ, ಅದಕ್ಕಾಗಿಯೇ ಇದಕ್ಕೊಂದು ಪರಿಹಾರ ನೀಡುವ ಉದ್ದೇಶದಿಂದ "ನಮ್ಮ ನಡೆ ಶಾಲೆ ಸ್ವಚ್ಛತೆ ಕಡೆಗೆ" ಎಂಬ ಅಭಿಯಾನವನ್ನು ಮಾಡುವ ಮೂಲಕ ಎಬಿವಿಪಿ ವಿದ್ಯಾರ್ಥಿಗಳು ಪೊರಕೆ ಹಿಡಿದು ಸ್ವಚ್ಛತೆಗೆ ಇಳಿದಿದ್ದಾರೆ.

ಇಂದು  ಶೃಂಗೇರಿ ತಾಲೂಕಿನ ಕಿಗ್ಗಾದ ಕೋಗಿನಬೈಲ್ ಸ.ಹಿ.ಪ್ರಾ. ಶಾಲೆಯ ಆವರಣ ಹಾಗೂ ಕೊಠಡಿಗಳನ್ನ ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಈ ಸ್ವಚ್ಛತೆ ಅಭಿಯಾನಕ್ಕೆ ಗ್ರಾಮಸ್ಥರು ಹಾಗೂ ಶಿಕ್ಷಕರು ಸಹ ಸಹಕರಿಸಿದರು,ಹಾಗೂ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ದಿನೇಶ್ ಭಟ್, ಕಿಗ್ಗಾ  ಎಂಬುವವರು ಮಾಡಿದ್ದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕರ್ತರನ್ನು ತೊಡಗಿಸಿಕೊಳ್ಳುವ ಮೂಲಕ ಪಾಠಶಾಲೆಗೊಂದಿಷ್ಟು ಸೇವೆ ಮಾಡುವ ಯೋಜನೆ ಹಮ್ಮಿಕೊಂಡಿದ್ದೆವೆ ಎಂದು ಎಬಿವಿಪಿ ಮುಖಂಡರು ತಿಳಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಎಬಿವಿಪಿ ಪ್ರತಿನಿಧಿಗಳಾದ ಸುಜಿತ್ ಹೆಚ್ ಆರ್, ಶೃಂಗ, ಮನೀಶ್, ಕಿಶೋರ್, ಶಶಾಂಕ್, ಸಚಿನ್, ಅನಿರುಧ್ ಹಾಗೂ ಮುಖ್ಯ ಶಿಕ್ಷಕರಾದ ನಂದ ಕಿಶೋರ್ ಇದ್ದರು.