ಆತ್ಮಹತ್ಯೆಗೆ ಯತ್ನಿಸಿದ ಅರಣ್ಯ ಇಲಾಖೆಯ ಸಿಬ್ಬಂದಿಯು ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿ ನೌಕರ ಮಹಾದೇವ ಎಂದು ಗುರುತಿಸಲಾಗಿದೆ, ಚನ್ನಗಿರಿ ಯ ಆರ್ ಎಫ್ ಓ ಸತೀಶ್ ಅವರು ಮಹಾದೇವ ಅವರಿಗೆ ತೀವ್ರ ಕಿರುಕುಳ ನೀಡುತ್ತಿದ್ದರು ಎಂದು ಆತ್ಮಹತ್ಯೆಗೆ ಯತ್ನಿಸಿದ ಮಹಾದೇವ ಅವರ ಧರ್ಮಪತ್ನಿ ಮೀನಾಕ್ಷಮ್ಮ ಆರೋಪಿಸಿದ್ದಾರೆ. ಭದ್ರಾವತಿ ಅರಣ್ಯ ವಿಭಾಗದ ದಾವಣಗೆರೆ ಜಿಲ್ಲೆ ಚನ್ನಗಿರಿ ವಲಯದ ಕ್ಷೇಮಾಭಿವೃದ್ಧಿ ನೌಕರ ಮಹಾದೇವ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು, ಸದ್ಯದ ಸ್ಥಿತಿಯಲ್ಲಿ ಅವರು ಈಗ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಾದೇವರ ಕುಟುಂಬಸ್ಥರು ಈ ಘಟನೆಗೆ ಆರ್ ಎಫ್ ಓ ಸತೀಶ್ ಅವರು ನೇರ ಹೊಣೆ ಎಂದು ಅಧಿಕಾರಿಗಳಿಗೆ ದೂರಿದ್ದಾರೆ.
ಹಿನ್ನೆಲೆ: ಮಹಾದೇವ ಅವರ ವರ್ಗಾವಣೆ ವಿಚಾರ ಕುರಿತು, ಕ್ಷುಲ್ಲಕ ಕಾರಣಕ್ಕೆ ಸತೀಶ್ ಹಾಗೂ ಮಹಾದೇವ ಅವರ ನಡುವೆ ವಾಗ್ವಾದ ನಡೆದಿದ್ದು,ಸತೀಶ್ ಅವರು ಆದರೆ ಕೆಲಸ ಮಾಡು ಇಲ್ಲದಿದ್ದಲ್ಲಿ ಬಿಟ್ಟು ಹೋಗು ಎಂದು ಮಹಾದೇವ ಅವರನ್ನು ನಿಂದಿಸಿದ್ದಾರೆ, ಈ ಕಾರಣದಿಂದಾಗಿಯೆ ಮಹಾದೇವ ಅವರು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದರು ಎಂದು ಪತ್ನಿ ಮೀನಾಕ್ಷಮ್ಮ ತಿಳಿಸಿದ್ದಾರೆ. ನಿಖರ ಕಾರಣಕ್ಕಾಗಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಹಾದೇವ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ, ಅವರ ಚಿಕಿತ್ಸಾ ವೆಚ್ಚವನ್ನು ಕೂಡ ಅರಣ್ಯಾಧಿಕಾರಿ ಸತೀಶ್ ನೀಡಬೇಕೆಂದು ಅವರ ಕುಟುಂಬಸ್ಥರು ಆಗ್ರಹ ಮಾಡಿದ್ದಾರೆ.


0 Comments