ಇಂದು ಮಾದಕ ದ್ರವ್ಯ ವಿರೋಧಿ ದಿನ, ಮಾದಕ ದ್ರವ್ಯಗಳು ಇಂದಿನ ಯುವ ಜನಾಂಗದ ಭವಿಷ್ಯವನ್ನು ಅಂಧಕಾರದತ್ತ ದೂಡುತ್ತಿವೆ. ಹೆಚ್ಚಾಗಿ ಯುವಕರು ಕ್ಷಣಿಕ ಖುಷಿಗಾಗಿಯೋ ಅಥವಾ ಕುತೂಹಲದಿಂದ ಪ್ರಾರಂಭಿಸುವ ಈ ಅಭ್ಯಾಸಗಳು ಮುಂದಿನ ದಿನಗಳಲ್ಲಿ ಅದರಿಂದ ಹೊರಬರಲಾಗದೆ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ.

ಇತ್ತೀಚೆನ ದಿನಗಳಲ್ಲಿ ಮಾದಕ ದ್ರವ್ಯದ ವಿರುದ್ಧ ಪೊಲೀಸ್ ಇಲಾಖೆ ಸಹ ಸಮರ ಸಾರಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವು  ಪೊಲೀಸ್ ಠಾಣೆಗಳಲ್ಲಿ ವಶಕ್ಕೆ ಪಡೆದುಕೊಂಡಿದ್ದ ಸರಿ ಸುಮಾರು 23.5 ಲಕ್ಷ ರೂ ಬೆಲೆಯ 157 ಕೆ.ಜಿ ಗಾಂಜಾವನ್ನು, ಅಂತರ ರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನವಾದ ಇಂದು ಹಾಸನದ ಹೊರವಲಯದಲ್ಲಿನ ಕೈಗಾರಿಕಾ ಪ್ರದೇಶದಲ್ಲಿನ ಜೀವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ನಾಶಪಡಿಸಲಾಯಿತು. ಜಿಲ್ಲಾ ರಕ್ಷಣಾಧಿಕಾರಿ ಎಂ.ಹೆಚ್ ಅಕ್ಷಯ್ ಅವರು ಇದರ ನೇತೃತ್ವ ವಹಿಸಿದ್ದರು.

ಈ ಸಂದರ್ಭದಲ್ಲಿ ಪರಿಸರ ಅಧಿಕಾರಿ ಶ್ವೇತಾ, ತರೀಕೆರೆ ಡಿ ವೈ ಎಸ್ಪಿ ಏಗನಗೌಡರ್ ಹಾಗೂ ಚಿಕ್ಕಮಗಳೂರಿನ ಡಿ ವೈ ಎಸ್ ಪಿ ಡಿಟಿ ಪ್ರಭು ಅವರು ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಮನೆಯಿಂದ ಕಳ್ಳ ಭಟ್ಟಿ ವಶ: ಪತಿಯ ಬಂಧನ


ಅಬಕಾರಿ ಇನ್ಸ್ಪೆಕ್ಟರ್ ಲೋಕೇಶ್ ಅವರ ತಂಡದಿಂದ ನಡೆದ ದಾಳಿಯಲ್ಲಿ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಕಾಳಿ ಕಟ್ಟೆ ಎಂಬಲ್ಲಿ ಕಳ್ಳ ಭಟ್ಟಿ ಸಾರಾಯಿ ವಶಪಡಿಸಿಕೊಳ್ಳಲಾಗಿದೆ.


ಮೂಡಿಗೆರೆ ತಾಲ್ಲೂಕಿನ ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಂಧ್ಯಾ  ಎಂಬುವವರ ಮನೆಯಲ್ಲಿ ಸಂಗ್ರಹಿಸಿದ್ದ ಸುಮಾರು 60 ಲೀಟರ್ ಕಳ್ಳಭಟ್ಟಿ ಹಾಗೂ 200 ಲೀಟರ್ ಬೆಲ್ಲದ ಕೊಳೆಯನ್ನು ಅಬಕಾರಿ ಅಧಿಕಾರಿಗಳು  ವಶಪಡಿಸಿಕೊಂಡಿದ್ದಾರೆ

ಮೂಡಿಗೆರೆ ಅಬಕಾರಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು ಅಧ್ಯಕ್ಷೆಯ ಪತಿ ಸುರೇಶ್ ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ