ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಶಾಸಕರಾದ ಮಾನ್ಯ ಸಿ.ಟಿ. ರವಿ ಅವರೇ, ಕಾರ್ಮಿಕರಿಗೆ ನೀವು ವಿತರಿಸುತ್ತಿರುವ ಆಹಾರ ಕಿಟ್ ಗಳು, ಜನ ಸಾಮಾನ್ಯರು ಸರಕಾರಕ್ಕೆ ಕಟ್ಟಿದ ತೆರಿಗೆ ಹಣದಿಂದವೇ ಹೊರತು, ನಿಮ್ಮ ಸಂಬಳದಿಂದಲ್ಲ ಎಂಬ ಪ್ರಜ್ಞೆ ನಿಮಗಿರಲಿ, ಎಂಬ ಮಾತನ್ನು ತೆರಿಗೆ ಕಟ್ಟಿದ  ಜನತೆಯ ಧ್ವನಿಯಾಗಿ ನಾನು ನಿಮಗೆ ತಿಳಿಸುತ್ತಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿಯಾದ ಬಿ.ಏಮ್ ಸಂದೇಶ್ ಹೇಳಿದರು. ನಿಮ್ಮ ಸರ್ಕಾರದ ವತಿಯಿಂದ ಹಣ ಸಂಗ್ರಹಿಸಿ ನೀವೇನು ಕಿಟ್ ಹಂಚುತ್ತಿಲ್ಲ, ಹಾಗಾಗಿ ನೀವು ಕಿಟ್ ಗಳನ್ನು ನಿಮ್ಮ ಪಕ್ಷದ  ಕಾರ್ಯಕರ್ತರಿಂದ ಹಂಚಿಸುವುದು ಎಷ್ಟು ಸರಿ ಎಂದು ಜನ ಸಾಮಾನ್ಯರಿಗೆ ಉತ್ತರಿಸಬೇಕು. ಇದನ್ನು ಸರ್ಕಾರದ ಅಧಿಕಾರಿಗಳಿಂದ ಹಂಚಿಸಲು ನಿಮ್ಮ ಕ್ಷೇತ್ರದಲ್ಲಿ  ಸರ್ಕಾರಿ ಅಧಿಕಾರಿಗಳ ಕೊರತೆ ಇದೆಯಾ? ಹಾಗೇನಾದರೂ ಇದ್ದಲ್ಲಿ  ನೀವು ಮತ್ತು ನಿಮ್ಮ ಸರ್ಕಾರವೇ ನೇರ ಹೊಣೆಗಾರರು ಅಗಿರುತ್ತೀರಿ. ನೀವು ಹೈ ಕೋರ್ಟ್ ನ್ಯಾಯಮೂರ್ತಿಗಳ ನಿಲುವನ್ನೇ ಪ್ರಶ್ನಿಸಿದ ಅತೀ ಬುದ್ಧಿವಂತ ಆಗಿದ್ದೀರಿ, ಹಾಗಾಗಿ ಈ ಆಹಾರ ಕಿಟ್ ಹಂಚಿಕೆಯ ವಿಚಾರದಲ್ಲಿ ನೀವು ದೊಡ್ಡ ಮೇಧಾವಿ ಹಾಗೆ ವರ್ತಿಸಿದ್ದಾದರು ಯಾಕೆ ಎಂದು ಜನತೆಗೆ ಸ್ಪಷ್ಟ ಪಡಿಸಿ ಎಂದು ಬಿ.ಎಂ. ಸಂದೇಶ್ ಆಕ್ರೋಶ ವ್ಯಕ್ತಪಡಿಸಿದರು.