ತೀರ್ಥಹಳ್ಳಿಯ ತುಂಗಾ ಕಾಲೇಜಿನ ಸಮೀಪದಲ್ಲಿ ವಾಸವಿದ್ದ ಕಮಲ್ ಎಂಬಾತ ದಿನಾಂಕ 11 ಜೂನ್ 2021 ರಂದು ಅಪ್ರಾಪ್ತ ಯುವತಿಯೋರ್ವಳನ್ನು ಪುಸಲಾಯಿಸಿ ಬಲವಂತವಾಗಿ ಕರೆದುಕೊಂಡು ಹೋಗಿ ಪಟ್ಟಣದ ಸಮೀಪದ ದೇವಸ್ಥಾನವೊಂದರಲ್ಲಿ ಬಲತ್ಕಾರದಿಂದ ತಾಳಿ ಕಟ್ಟಿದ್ದಾನೆ. 17 ವರ್ಷದ ವಯಸ್ಸಿನ ಹುಡುಗಿಯನ್ನು ಪ್ರೀತಿಸುವ ನೆಪದಲ್ಲಿ ತಾಳಿಕಟ್ಟೆ ಅದಕ್ಕೆ ಮದುವೆಯ ಸೋಗು ಹಾಕಿದ್ದಾನೆ, ಆ ನಂತರ ತೀರ್ಥಹಳ್ಳಿ ಪಟ್ಟಣದ ಆರಗ ರಸ್ತೆಯಲ್ಲಿರುವ ಸುರಾನಿ ಸಮೀಪದ ಪರಿಚಯದವರ ತೋಟಕ್ಕೆ ಕರೆದುಕೊಂಡು ಹೋಗಿ ಅಕ್ರಮವಾಗಿ ಬಲತ್ಕಾರ ನಡೆಸಿ ಅತ್ಯಾಚಾರವೆಸಗಿದ್ದಾನೆ. ಯುವತಿಯ ಪೋಷಕರಿಗೆ ವಿಷಯ ತಿಳಿದು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ, ಪೊಲೀಸರು ಆರೋಪಿಯು ತೋಟದಲ್ಲಿರುವುದನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸಧ್ಯ ಯುವತಿಯ ದೂರಿನ ಮೇರೆಗೆ ಅಪ್ರಾಪ್ತ ಯುವತಿಯ ಮೇಲೆ ಲೈಂಗಿಕ ಕಿರುಕುಳಕ್ಕೆ ಪೋಸ್ಕೋ ಕಾಯ್ದೆಯ ಅಡಿಯಲ್ಲಿ, ಅಪ್ರಾಪ್ತೆಯನ್ನು ಬಲವಂತವಾಗಿ ಮದುವೆಯಾದ ಪ್ರಕರಣ ಹಾಗೂ ಯುವತಿಯ ಅಪಹರಣ ಹಾಗೂ ಅತ್ಯಾಚಾರ ಪ್ರಕರಣವನ್ನು ದಾಖಲಿಸಲಾಗಿದೆ.
ಆರೋಪಿಯು ಈ ಹಿಂದೆಯೂ ಸಹ ಅನೇಕ ಕಾಲೇಜ್ ಯುವತಿಯರಿಗೆ ಹಾಗೂ ಗ್ರಾಮದ ಕೆಲವು ಯುವತಿಯರಿಗೆ ಲೈಂಗಿಕ ಕಿರುಕುಳ ಕೊಡುತ್ತಿದ್ದ ಬಗ್ಗೆ ಠಾಣೆಗೆ ದೂರು ಸಹ ದಾಖಲಾಗಿತ್ತು ಎಂದು ಮಾಹಿತಿಯಿದೆ


0 Comments