ದೇಶಾದ್ಯಂತ ಕೊರೋನಾ ಹಿನ್ನೆಲೆ ಇಡೀ ದೇಶವೇ ಲಾಕ್ಡೌನ್ ಪರಿಸ್ಥಿತಿಯನ್ನು ಎದುರಿಸಿದ್ದು, ಆನಂತರದ ದಿನಗಳಲ್ಲಿ ಅನ್ಲಾಕ್ ಆಗಿ ಪರಿಸ್ಥಿತಿಯು ನಿಯಂತ್ರಣಕ್ಕೆ ಬಂದಿದ್ದು ಕೆಎಸ್ಸಾರ್ಟಿಸಿ ಬಸ್ ಗಳು ಎಂದಿನಂತೆಯೇ ಸಂಚಾರವನ್ನು ಆರಂಭಗೊಳಿಸಿದ್ದು , ಇದೀಗ ಚಿಕ್ಕಮಗಳೂರು ಜಿಲ್ಲೆ ಅನ್ಲಾಕ್ ಆದ ನಂತರದ ದಿನಗಳಲ್ಲಿ ವಿರಳವಾಗಿದ್ದ ಕೆಕೆಬಿ ಬಸ್ಸುಗಳ ಸಂಚಾರವು ನಾಳೆಯಿಂದ ಮತ್ತೆ ಪುನರಾರಂಭಗೊಳ್ಳಲಿದೆ.
ಪ್ರಾಯೋಗಿಕ ಹಂತದಲ್ಲಿ ಸುಮಾರು ಹತ್ತರಿಂದ ಹದಿನೈದು ಬಸ್ಸುಗಳ ಸಂಚಾರವು ಆರಂಭವಾಗಲಿದ್ದು, ಜುಲೈ 5ನೇ ತಾರೀಖಿನ ನಂತರದ ದಿನಗಳಲ್ಲಿ ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಉಳಿದ ಬಸ್ಸುಗಳ ಸಂಚಾರದ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಕೆಕೆಬಿ ಸಂಸ್ಥೆಯ ಮ್ಯಾನೇಜರ್ ಪ್ರಾಣೇಶ್ ನ್ಯೂಸ್ ಮಲ್ನಾಡ್ ಗೆ ತಿಳಿಸಿದ್ದಾರೆ.




0 Comments