ಚಿಕ್ಕಮಗಳೂರು : ಅತ್ಯಾಚಾರ ಪ್ರಕರಣದ ಆರೋಪಿಯಾಗಿದ್ದ ಕಿರಗುಂದ ಗ್ರಾಮದ ಪುನೀತ್ ಗೆ ಜಿಲ್ಲಾ ಸೆಷನ್ ಕೋರ್ಟ್ ನಲ್ಲಿ ಜಾಮೀನು ಮಂಜೂರಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆಯ ಕಿರಗುಂದ ಗ್ರಾಮದ ಪುನೀತ್ ವಿರುದ್ಧ ಮಹಿಳೆಯೊಬ್ಬರ ದೂರನ್ನು ಆಧರಿಸಿ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಠಾಣಾಧಿಕಾರಿ ಪಿ ಎಸ್ ಐ ಅರ್ಜುನ್ ಅವರು ಪುನೀತ್ ಗೆ ವಿಚಾರಣೆ ವೇಳೆ ಮೂತ್ರ ಕುಡಿಸಿದ್ದರು ಎಂಬ ಪುನೀತ್ ಆರೋಪದ ಹಿನ್ನಲೆ PSI ಅರ್ಜುನ್ ಅವರನ್ನು ಅಮಾನತು ಮಾಡಲಾಗಿತ್ತು. ಸದ್ಯ ಈ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ.
ಸೆಕ್ಷನ್ 354(A) (b) 376 ರ ಅಡಿ ಆರೋಪಿ ಪುನೀತ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಹೈಕೋರ್ಟ್ ವಕೀಲರಾದ ಬೆಂಗಳೂರಿನ ಪಲ್ಲಿವಿ ರೋಷನ್ ಅವರು ಪುನೀತ್ ಪರ ವಕಾಲತ್ತು ವಹಿಸಿದ್ದರು.


0 Comments