ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ್ದು ಇದರಲ್ಲಿ ನಾಲ್ಕು ಅಂಗಡಿಗಳು ಸಂಪೂರ್ಣ ಭಸ್ಮವಾಗಿವೆ. ಬೇಕರಿ, ಚಪ್ಪಲಿ ಅಂಗಡಿ, ಮೊಬೈಲ್ ಅಂಗಡಿ, ಹಾಗೂ ಕಟ್ಟಿಂಗ್ ಶಾಪ್ ಗಳು ಸಂಪೂರ್ಣವಾಗಿ ಬೆಂಕಿ ಪಾಲಾಗಿದೆ.

ಮೂಡಿಗೆರೆ ತಾಲೂಕು ಬಣಕಲ್ ನ ಮಹೇಶಗೌಡ ಎಂಬುವರಿಗೆ ಸೇರಿದ ಕಾಂಪ್ಲೆಕ್ಸ್ ಇದಾಗಿತ್ತು. ಬೆಂಕಿ ಆರಿಸಲು ಮೂಡಿಗೆರೆ ಹಾಗೂ ಚಿಕ್ಕಮಗಳೂರು ಅಗ್ನಿಶಾಮಕ ದಳ ಸಿಬ್ಬಂಧಿ ಸ್ಥಳಕ್ಕೆ ಧಾವಿಸಿದ್ದರು. ಹಾಗೆಯೇ ಸಬ್ ಇನ್ಸ್ಪೆಕ್ಟರ್ ಶ್ರೀನಾಥ್ ರೆಡ್ಡಿ ಮತ್ತು ಪೊಲೀಸರು ಸಹ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಎಂಬ ಊರಿನಲ್ಲಿ ಘಟನೆ ನಡೆದಿದ್ದು ಬೆಂಕಿ ಅವಘಡಕ್ಕೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ.