ಚಿಕ್ಕಮಗಳೂರು ಜಿಲ್ಲಾ ಒಕ್ಕಲಿಗರ ನೌಕರರ ಕೌಶಲ್ಯ ಅಭಿವೃದ್ಧಿ ಭವನದ ಬಳಿ ಯುವಕನ ಶವ ಪತ್ತೆಯಾಗಿದ್ದು, ಚಿಕ್ಕಮಗಳೂರಿನ ಗೌಡನಹಳ್ಳಿ ಇಂಡಸ್ಟ್ರಿಯಲ್ ಏರಿಯಾದ ಇಪ್ಪತ್ತೇಳು ವರ್ಷದ ಕುಮಾರ್ ಎಂಬ ಯುವಕ  ಸಾವನ್ನಪ್ಪಿರುವ ವ್ಯಕ್ತಿ.

ಮೃತ ಯುವಕ ವೃತ್ತಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದನು. ಜಿಲ್ಲಾ ಒಕ್ಕಲಿಗರ ನೌಕರರ ಕೌಶಲ್ಯ ಅಭಿವೃದ್ಧಿ ಭವನದ ಬಳಿಯ ಶೆಡ್ ಒಂದರ ಬಳಿ ಯುವಕನ ಶವ ಅನುಮಾನಾಸ್ಪದವಾದ ರೀತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ಇದನ್ನು ಕೊಲೆ ಎಂಬ ಶಂಕೆ ವ್ಯಕ್ತಪಡಿಸುತ್ತಿದ್ದಾರೆ.

ಶವ ಇರುವ ಜಾಗದಿಂದ ಸ್ವಲ್ಪ ದೂರದಲ್ಲಿಯೇ ಮೃತ ವ್ಯಕ್ತಿಯು ತೊಟ್ಟಿದ್ದ ಬಟ್ಟೆಗಳು ದೊರಕಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದು ತನಿಖೆ ಆರಂಭಿಸಿದ್ದಾರೆ.