ಮೂಡಿಗೆರೆಯ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಠಾಣಾಧಿಕಾರಿ ಅರ್ಜುನ್ ಅವರನ್ನು ಸಸ್ಪೆಂಡ್ ಮಾಡಿ ಆದೇಶಿಸಲಾಗಿತ್ತು.

ಈ ಕುರಿತು ದಲಿತ ಸಂಘಟನೆಗಳು ಹೋರಾಟಕ್ಕೆ ಕರೆ ನೀಡಿದ್ದು ಪತ್ರಿಕಾ ಹೇಳಿಕೆ ನೀಡಲಾಗಿದೆ.

ದಿನಾಂಕ 10 ಮೇ 2021ರಂದು ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಕಿರುಗುಂದ ಗ್ರಾಮದ ಕೆ.ಎಲ್. ಪುನೀತ್ ಎಂಬ ಯುವಕನನ್ನು ಗೋಣಿಬೀಡು ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಅರ್ಜುನ್ ವಿನಾಕಾರಣ ಠಾಣೆಗೆ ಎಳೆದೊಯ್ದು ಆತನಿಗೆ ಜಾತಿ ನಿಂದನೆ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿ ಮೂತ್ರ ಕುಡಿಸಿ ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ, ಆದಕಾರಣ ಪಿಎಸ್ಐ ಯನ್ನು ಕೆಲಸದಿಂದ ವಜಾ ಮಾಡಿ, ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಸರ್ಕಾರದ ಗಮನ ಸೆಳೆಯುವ ಸಲುವಾಗಿ ದಿನಾಂಕ 09.7.2021 ಶುಕ್ರವಾರ ದಂದು ಮೂಡಿಗೆರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈ ಬೃಹತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ  ರಾಜಕಾರಣಿಗಳು, ರಾಜಕೀಯ ಮುಖಂಡರುಗಳು ಹಾಗೂ ಕಾರ್ಯಕರ್ತರು,ಪ್ರಗತಿ ಪರ ಸಂಘಟನೆಗಳಾದ ಸಿ.ಪಿ ಐ.ಸಿ ಪಿ ಐ ಎಮ್ ಎಲ್, ರೈತಸಂಘ, ಕನ್ನಡಪರ ಸಂಘಟನೆಗಳು,  ವರ್ತಕರ ಸಂಘ,ಆಟೋರಿಕ್ಷಾ ವಾಹನ ಮಾಲೀಕರು ಚಾಲಕರ ಸಂಘ,ಟ್ಯಾಕ್ಷಿ ಮಾಲೀಕರು ಹಾಗೂ ಚಾಲಕರ ಸಂಘ ಹಾಗೂ ಟೈಲರ್ ಅಸೋಸಿಯೇಶನ್, ಎಲ್ಲಾ ಪ್ರಗತಿಪರ ಮುಸ್ಲಿಂ ಸಂಘಟನೆಗಳು, ಹಾಗೂ ಕೂಲಿ ಕಾರ್ಮಿಕರು,ಕಟ್ಟಡ ಕಾರ್ಮಿಕರು, ಹಿತೈಷಿಗಳು ಹಾಗೂ ಬಂಧುಗಳು ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂತ್ರಸ್ತ ಯುವಕ ಕೆ.ಎಲ್. ಪುನೀತ್ ನಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಕೇಳಿಕೊಳ್ಳುತಿರುವುದಾಗಿ ಮೂಡಿಗೆರೆ ತಾಲೂಕಿನ ಪಜಾ ಪರಿಶಿಷ್ಟ ಪಂಗಡ ಗಳ ಹಿತರಕ್ಷಣಒಕ್ಕೂಟದ ಕಾರ್ಯದರ್ಶಿಯಾದ ಕಿರಗುಂದ ರಾಮಯ್ಯ ತಿಳಿಸಿದ್ದಾರೆ.