ಶಿವಮೊಗ್ಗದ ಸಾಗರ ತಾಲೂಕಿನ ಬಾರಂಗಿ ಹೋಬಳಿಯ ಕಡಕೊಡಿನಿಂದ ಸುಮಾರು 3 ಕಿಮೀ ದೂರದ ಊರಾದ ಕಲಗಲಿ ಯ ತಗ್ತಿ ಎಂಬ ಊರಿನ ಜನರು ಎದುರಿಸುತ್ತಿರುವ  ಸಂಕಷ್ಟದ  ಪರಿಸ್ಥಿತಿಯು ವ್ಯವಸ್ಥೆಯನ್ನು ಅಣಕಿಸುವಂತಿದೆ.

ಶರಾವತಿ ಹಿನ್ನೀರಿನ ಪರಿಸರದಲ್ಲಿ ಸಿಗುವ ಈ ಗ್ರಾಮಕ್ಕೆ ಸರಿಯಾದ ರಸ್ತೆ ಸಂಪರ್ಕವೇ ಇಲ್ಲ. ಏನಾದರೂ ಆರೋಗ್ಯ ಸಮಸ್ಯೆ ಉಂಟಾದರೆ ರೋಗಿಯ ಆಯಸ್ಸು ಗಟ್ಟಿ ಇದ್ದರೆ ಮಾತ್ರ ಅವನು ಬದುಕುತ್ತಾನೆ. ಮಳೆಗಾಲ ಬಂತೆಂದರೆ ಸುಮಾರು 15 ಕಿಲೋಮೀಟರ್ ಗಳಷ್ಟು ದೂರ ಹೊತ್ತುಕೊಂಡೇ ಸಾಗಬೇಕಾದ ಕಾಲು ದಾರಿ, ಯಾವುದೇ ಆಂಬುಲೆನ್ಸ್ ಬರಲು ಇಲ್ಲಿಗೆ ರಸ್ತೆ ನಿರ್ಮಾಣ ವಾಗಿಲ್ಲ. ವಿದ್ಯುತ್ ಅಂತು ಕನಸಿನ ಮಾತು, ಇನ್ನು ನೆಟ್ವರ್ಕ್ ನ ಬಗ್ಗೆ ಹೇಳುವುದಾದರೆ ಇಲ್ಲಿಯ ಜನರು ಆ ಪದವನ್ನೇ ಮರೆತಿದ್ದಾರೆ. ಯಾವ ಸರ್ಕಾರ ಬಂದರೂ ಸಹ ಈ ಗ್ರಾಮದ ಉನ್ನತಿ ಹಾಗೂ ಅಭಿವೃದ್ದಿಯ ಕಡೆ ಗಮನ ಹರಿಸುವುದಿಲ್ಲ. ಮುಖ್ಯವಾಗಿ ಬೇಕಾಗುವ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಸಹ ಸರ್ಕಾರ ಒದಗಿಸದೆ ಇರುವುದು ಸರ್ಕಾರದ ದೌರ್ಬಲ್ಯವೆಂದೇ ಹೇಳಬಹುದು. 


visit: www.kavyaherbaloil.com

ಡಿಜಿಟಲ್ ಕ್ರಾಂತಿ ಒಂದೆಡೆ ಯಾದರೆ ರಸ್ತೆ ಗೆ ಬರಲು 15 ಕಿಮೀ ಸಂಚಾರ ಮಾಡುವ ಅಸಹಾಯಕತೆ ಇನ್ನೊಂದೆಡೆ. ಬದಲಾಗುತ್ತಿರುವ ಈ 21 ನೆ ಶತಮಾನದಲ್ಲೂ ಕೂಡ ಈ ರೀತಿಯ ಮನ ಕಲುಕುವ ರೀತಿಯಲ್ಲಿರುವ  ಅಲ್ಲಿನ ವಾಸಿಗಳ ಸಂಕಷ್ಟ ಯಾರಿಗೂ ಬಾರದಿರಲಿ.

ಮುಂದಿನ ದಿನಗಳಲ್ಲಿ ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಲ್ಲಿನ ಜನರಿಗೆ ಮೂಲ ಸೌಕರ್ಯವನ್ನು ಕಲ್ಪಿಸಲು ಗಮನಹರಿಸಬೇಕಿದೆ.





ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6