ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಹಲವು ಭಾಷೆಗಳನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲಾಗಿದೆ. ಹಾಗೆ ಸೇರಿಸಲ್ಪಟ್ಟವುಗಳಲ್ಲಿ ಅನೇಕ ಭಾಷೆಗಳು ಸಂಖ್ಯಾಬಲದಲ್ಲಿ ತುಳುವಿಗಿಂತ ಬಲಿಷ್ಠವಾದುದಲ್ಲ. ಭಾಷಾ ವ್ಯಾಕರಣ ಇತ್ಯಾದಿ ದೃಷ್ಟಿಯಿಂದಲೂ ತುಳುವಿಗಿಂತ ಸಮೃದ್ಧ ಭಾಷೆಗಳೂ ಅಲ್ಲವೆಂದು ಸಾಬೀತಾಗಿದೆ.
ಅರ್ಧ ಲಕ್ಷದಷ್ಟು ಜನರು ಮಾತನಾಡುವ ಭಾಷೆಗಳಿಗೂ ಸಂವಿಧಾನದಲ್ಲಿ ಮಾನ್ಯತೆ ಸಿಕ್ಕಿದೆ.
ತುಳು ಒಂದು ದೊಡ್ಡ ವರ್ಗದ ಜನರ ಭಾಷೆ, ಶತಮಾನಗಳ ಕಾಲ ಹೋರಾಡಿದ ಜನಾಂಗದ ಭಾಷೆ, ಅತ್ಯಂತ ಪುರಾತನ ದ್ರಾವಿಡ ಭಾಷೆಗಳಲ್ಲಿ ಒಂದು. ಇದು ಜನರನ್ನು ಒಂದಾಗಿರಿಸಿದೆ.
ತುಳುವನ್ನು 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಹಲವು ವರ್ಷಗಳಿಂದ ಹೋರಾಟಗಳು ನಡೆದುಕೊಂಡು ಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕರಾದ ಸಿ.ಟಿ ರವಿ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು. ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಸ್ಮಿತೆಯ ತುಳು ಭಾಷೆಯನ್ನು ಭಾರತ ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ತುಳು ಭಾಷೆಯ, ಭಾಷಿಕರ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಬೆಳೆಸುವಲ್ಲಿ ಹಾಗೆಯೇ ಇದು ತುಳು ಲಿಪಿಯ ಪುನರುತ್ಥಾನದಲ್ಲೂ ಪ್ರಮುಖ ವಹಿಸಲಿದೆ ಎಂದು ಶಾಸಕ ಸಿ.ಟಿ.ರವಿ ಹೇಳಿದ್ದಾರೆ.
ತುಳು 15ನೇ ಶತಮಾನದವರೆಗೆ ತನ್ನ ಸ್ವಂತ ಲಿಪಿಯನ್ನು ಹೊಂದಿದ್ದ ಭಾಷೆಯಾಗಿದ್ದು, 19 ಲಕ್ಷಕ್ಕೂ ಹೆಚ್ಚು ತುಳು ಮಾತೃಭಾಷಿಕರು ಆಡುವ ಹಾಗೂ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಮಡಿಕೇರಿ ಹಾಗೂ ಮಲೆನಾಡಿನ ಕೆಲ ಭಾಗಗಳಲ್ಲಿ ವ್ಯವಹಾರಿಕ ಭಾಷೆಯಾಗಿ ತುಳು ಬಾಷೆ ಬಳಸಲ್ಪಡುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.



0 Comments