ಕೊಪ್ಪ : ಸುಮಾರು 80 ಕೆ.ಜಿ ತೂಕದ 15 ಅಡಿ ಉದ್ದದ ಬೃಹತ್ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ಸೆರೆಹಿಡಿದಿರೋ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ ನಡೆದಿದೆ. 
ಉಮೇಶ್ ಭಟ್ ಎಂಬುವವರ ತೋಟದಲ್ಲಿ ಈ ಹೆಬ್ಬಾವನ್ನ ಸೆರೆ ಹಿಡಿದಿದ್ದು. ತೋಟದಲ್ಲಿ ಕಳೆ ಕೀಳುವಾಗ ಕೂಲಿ ಕಾರ್ಮಿಕರು ಮೊದಲು ಹೆಬ್ಬಾವನ್ನು ಕಂಡಿದ್ದಾರೆ.
ನಂತರ ಸ್ಥಳಕ್ಕೆ ಬಂದ ಉರಗತಜ್ಞರಾದ ಕೊಪ್ಪದ ಹರೀಂದ್ರ ಅವರು ಸುಮಾರು ಅರ್ಧ ಗಂಟೆಗಳ ಕಾಲ ಪ್ರಯತ್ನ ನಡೆಸಿ ಸ್ಥಳೀಯರ ಸಹಕಾರದೊಂದಿಗೆ ಹೆಬ್ಬಾವನ್ನು ಸೆರೆ ಹಿಡಿದಿದ್ದಾರೆ.


ಆಹಾರ ಸಿಗದೇ ಉಪವಾಸ ಇದ್ದುದರಿಂದ ಹಾವು ನಿತ್ರಾಣಗೊಂಡಿತ್ತು, ಹಾಗಾಗಿ ಹೆಚ್ಚು ಪ್ರತಿರೋಧ ತೋರಲಿಲ್ಲ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು ಹಾವನ್ನು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ.