ಚಿಕ್ಕಮಗಳೂರು: ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ  ಸಿಮ್ರಾನ್ ಅವರನ್ನು ಗಂಡ ಫೈರೋಜ್ ಸಂಪ್ ಗೆ ತಳ್ಳಿ ಕೊಲೆ ಮಾಡಿದ ಘಟನೆ, ಚಿಕ್ಕಮಗಳೂರು ನಗರದಲ್ಲಿ ನಡೆದಿದೆ. 

ಪತಿ ಫೈರೋಜ್ ನ ನಡತೆಯ ಮೇರೆಗೆ ಸಂಶಯಗೊಂಡ ಪತ್ನಿ ಈ ಕುರಿತು ಪ್ರಶ್ನೆ ಮಾಡಿದ್ದಕ್ಕೆ ಹೆಂಡತಿ ಸಿಮ್ರಾನ್ ಳನ್ನು ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪತ್ನಿ ಅನೈತಿಕ ಸಂಬಂಧದ ಕುರಿತು ಪ್ರಶ್ನಿಸಿದಾಗ ಕೋಪಗೊಂಡ ಪತಿ ಸಿಮ್ರಾನ್ ಳನ್ನು ನೀರಿನ ಸಂಪಿನಲ್ಲಿ ಮುಳುಗಿಸಿ ಕೊಂದಿದ್ದಾನೆ. 

ಈ ಕುರಿತು ಪ್ರಕರಣ ಕೈಗೆತ್ತಿಕೊಂಡಿರುವ ನಗರ ಠಾಣಾ ಪೊಲೀಸರು ಪತಿ ಫೈರೋಜ್, ಹಾಗೂ ಆತನ ತಂದೆ ತಾಯಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.