ಚಿಕ್ಕಮಗಳೂರಿನ ರಸ್ತೆಯ ಆಸುಪಾಸಿನಲ್ಲಿ ಮಲಗಿದ್ದ ದನಗಳನ್ನು ತೂಫಾನ್ ವಾಹನಕ್ಕೆ ತುಂಬಲು ಹೋಗಿ ಪೊಲೀಸರ ಕೈಗೆ ಇಬ್ಬರು ಆರೋಪಿಗಳು ಸೆರೆಸಿಕ್ಕಿದ್ದಾರೆ. ಬಿನ್ನಡಿ ಗ್ರಾಮದ ಬಳಿ ರಸ್ತೆಯಲ್ಲಿ ಮಲಗಿದ್ದ ಹಸುಗಳನ್ನು ತುಂಬುವ ಸಲುವಾಗಿ ಬಂದಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಎಂದಿನಂತೆ ರಾತ್ರಿಯ ವೇಳೆಯಲ್ಲಿ ಪೊಲೀಸ್ ವಾಹನ ಗಸ್ತು ತಿರುಗುತ್ತಿತ್ತು ಅಂತೆಯೇ ಇಂದು ಪೊಲೀಸರು ಗಸ್ತು ತಿರುಗುವ ಸಂದರ್ಭದಲ್ಲಿ ಅನುಮಾನಾಸ್ಪದವಾಗಿ ಕಂಡ ಇಬ್ಬರನ್ನು ಪೊಲೀಸರು ವಿಚಾರಣೆ ನಡೆಸುವ ವೇಳೆ ಒಬ್ಬ ಆರೋಪಿ ಜೀಶಾನ್ ಪರಾರಿಯಾಗಿದ್ದಾನೆ, ಇನ್ನೊಬ್ಬ ಆರೋಪಿ ಇರ್ಫಾನ್ ಅಲಿ ಪೊಲೀಸರ ಅತಿಥಿಯಾಗಿದ್ದಾನೆ. ಈ ಕೃತ್ಯಕ್ಕೆ ಬಳಸಿಕೊಂಡಿದ್ದ ತೂಫಾನ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಹಾಗೂ ಆರೋಪಿ ಇರ್ಫಾನ್ ಅಲಿ ಪೊಲೀಸರ ವಶದಲ್ಲಿದ್ದಾನೆ. ಪ್ರಕರಣವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಣಕಲ್ ಠಾಣೆಯ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಈ ಹಿಂದೆಯೂ ಕೂಡ ಇದೇ ರೀತಿಯಾಗಿ ಯಾರ ಭಯವೂ ಇಲ್ಲದೆ ಮೂಕ ಪ್ರಾಣಿಗಳನ್ನು ಮಾಂಸಕ್ಕಾಗಿ ಕದ್ದೊಯ್ಯುವ ಅಮಾನವೀಯ ಕೃತ್ಯಗಳು ಮಲೆನಾಡಿನಲ್ಲಿ ನಡೆಯುತ್ತಲೇ ಇತ್ತು ಇದೀಗ ಪೊಲೀಸರು ಗಸ್ತು ತಿರುಗುವ ವೇಳೆಯಲ್ಲಿ ಅಪರಾಧಿಗಳನ್ನು ಬಂಧಿಸಿರುವುದು ಪ್ರಶಂಸನೀಯವಾಗಿದೆ.
ವರದಿ ತನು ಕೊಟ್ಟಿಗೆಹಾರ




0 Comments