ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಅಂಗವಾಗಿ ಇಂದು ಶೃಂಗೇರಿಯ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಕಾರ್ಯಕರ್ತರು ಶೃಂಗೇರಿ ತಾಲೂಕಿನ ಗುಬ್ಬಗೊಡು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯನ್ನು ಸ್ವಚ್ಛಗೊಳಿಸಿದರು. 

ಹಲವಾರು ತಿಂಗಳುಗಳಿಂದ ತೆರೆಯದೆ ಮುಚ್ಚಿದ್ದ ಶಾಲೆಯನ್ನು ಇಂದು ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರೆಲ್ಲರೂ ಸೇರಿ ಸ್ವಚ್ಛಗೊಳಿಸಿದರು. ಈ ಸಂದರ್ಭದಲ್ಲಿ ಅಭಾವಿಪದ ನಗರ ಕಾರ್ಯದರ್ಶಿಯಾದ ಸುಜಿತ್ ಸಹ ಕಾರ್ಯದರ್ಶಿಯಾದ ನಾಗಪ್ರಸಾದ್, ಕಾರ್ಯಕರ್ತರಾದ ಶೃಂಗ ಪ್ರೀತಮ್ ಪ್ರಜ್ವಲ್ ಹಾಗೂ ಇನ್ನಿತರ ಹಿರಿಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

ವಿಧ್ಯಾರ್ಥಿ ಪರಿಷತ್ ಕಾರ್ಯಕರ್ತರ ಈ ಕಾರ್ಯಕ್ಕೆ ಬಿಜೆಪಿ ಯುವ ಮೋರ್ಚಾದಲ್ಲಿರುವ ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ಶ್ರೇಯಸ್ ಕವಿಲುಕುಡಿಗೆ, ಕೊಪ್ಪ ತಾಲೂಕು ಯುವ ಮೋರ್ಚಾ ಉಪಾಧ್ಯಕ್ಷ ಸುಭಾಶ್ ಚಂದ್ರ, ಶೃಂಗೇರಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ್ ಗುಬ್ಬಗೋಡು ಹಾಗು ಎಬಿವಿಪಿಯ ಹಿರಿಯ ಕಾರ್ಯಕರ್ತರಾದ ಮಂಜ ನಾಯ್ಕ ಅವರು ಭೇಟಿ ನೀಡಿ ಈ ಕಾರ್ಯಕ್ಕೆ ಸಹಕರಿಸಿದರು.