ವೇದ ಶಾಸ್ತ್ರಗಳಲ್ಲಿ ಪಾರಂಗತರಾಗಿದ್ದ, ಕೊಪ್ಪ ತಾಲೂಕಿನ ಜಯಪುರದ ಆಂಜನೇಯ ದೇವಾಲಯದ ಅರ್ಚಕರಾದ ಎನ್. ಕೆ ಸೀತಾರಾಮ್ ಭಟ್ ಅವರು ಇಂದು ಮುಂಜಾನೆ ದೈವಾದೀನರಾದರು.
ವೇದ ಅಧ್ಯಯನಗಳಲ್ಲಿ ಪರಿಣಿತರಾದ ಶ್ರೀಯುತ ಸೀತಾರಾಮ ಭಟ್ಟರು ಅಪರಕ್ರಿಯೆ ಗಳಿಗೆ ಯಾರೂ ಮುಂದೆ ಬಾರದ ಸಮಯದಲ್ಲಿ ಸಹ ಮುಂದೆ ಬಂದು ಶಾಸ್ತ್ರೋಕ್ತವಾಗಿ ಅಪರ ಕ್ರಿಯೆಯನ್ನು ನಡೆಸುತ್ತಿದ್ದರು, ದೇವರ ಪೂಜೆಗಾಗಲಿ ಅಥವಾ ಅಪರಕ್ರಿಯೆಗಳಿಗಾಗಲೀ ಎಂದಿಗೂ ಹಣವನ್ನು ಅಪೇಕ್ಷೆ ಪಡುತ್ತಿರಲಿಲ್ಲ.ಅವರ ಸೇವೆ ಅತ್ಯಂತ ಶ್ಲಾಘನೀಯವಾದದ್ದು
ಮಲೆನಾಡಿನ ಭಾಗದಲ್ಲಿ ಇವರು ನಡೆಸಿದಸ್ಟು ಅಪರ ಕ್ರಿಯೆಗಳನ್ನು ಬೇರೆ ಯಾರೂ ಮಾಡಿಲ್ಲ.
ವೇದ ವಿದ್ವಾನ್ ಸೀತಾರಾಮ್ ಭಟ್ಟರು ತಮ್ಮ ಹಲವಾರು ಶಿಷ್ಯರನ್ನು ಅಪರಕ್ರಿಯೆ ನಡೆಸಲು ಸಿದ್ಧಪಡಿಸಿ ಬಾರದ ಲೋಕಕ್ಕೆ ತೆರಳಿದ್ದಾರೆ, ಅತ್ಯಂತ ಸೌಮ್ಯ ಸ್ವಭಾವದ ಮೃದು ಮನಸ್ಸನ್ನು ಹೊಂದಿದ್ದ ಶ್ರೀಯುತರು ಪತ್ನಿ, ನಾಲ್ವರು ಗಂಡು ಮಕ್ಕಳು, ಮೂರು ಜನ ಹೆಣ್ಣುಮಕ್ಕಳು, ಹಾಗೂ ಅಪಾರವಾದ ಶಿಷ್ಯ ವೃಂದವನ್ನು ಅಗಲಿದ್ದಾರೆ.




0 Comments