ಬಾಳೂರು ಸುತ್ತಮುತ್ತ ಕಾಡಾನೆ ಹಾವಳಿ : ಅಪಾರ ಬೆಳೆ ಹಾನಿ

ಕೊಟ್ಟಿಗೆಹಾರ, ಬಾಳೂರು ಹೋಬಳಿಯ ಸುಂದರಬೈಲ್, ಚಕ್ಕೋಡು, ಆಲೇಕಾನ್, ಮಲೆಮನೆ, ಜಾವಳಿ ಸುತ್ತಮುತ್ತ ಮೂರು ಕಾಡಾನೆಗಳ ದಂಡು ಬೀಡು ಬಿಟ್ಟಿದ್ದು ,ಜನರು ಆತಂಕಗೀಡಾಗಿದ್ದಾರೆ.

visit: www.kavyaherbaloil.com

ತಿಂಗಳಿನಲ್ಲಿಯೂ ಮೂರು ಕಾಡಾನೆಗಳು ವಾರಗಟ್ಟಲೇ ಈ ಭಾಗಗಳಲ್ಲಿ ಬೀಡು ಬಿಟ್ಟು ಕಾರ್ಮಿಕರಿಗೆ ಆತಂಕ ಸೃಷ್ಟಿಸಿದ್ದವು. ನಂತರ ಅರಣ್ಯಾಧಿಕಾರಿಗಳು ಹರಸಾಹಸ ಪಟ್ಟು ಹೇಗೋ ಕಾಡುಗದ್ದೆ ಮೂಲಕ ಅರಣ್ಯಕ್ಕೆ ಅಟ್ಟಿದ್ದರು. ಆದರೆ ಈ ಬಾರಿ ಬೇರೆಯೇ ಮೂರು ಕಾಡಾನೆಗಳು ಸಬ್ಲಿ ಮಾರ್ಗವಾಗಿ ಕುಂಬಳಕಾಡು, ಬಾಳೂರು ಆಸುಪಾಸು ಬೀಡು ಬಿಟ್ಟಿದ್ದು ಕಾಡಾನೆಗಳನ್ನು ಓಡಿಸಲು ಅರಣ್ಯ ಇಲಾಖೆ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಲು ಮತ್ತೆ ಹರಸಾಹಸ ಪಡುವಂತಾಗಿದೆ. ಕಾಡಾನೆಗಳ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ಹೋಗಲು ಭಯಪಡುವಂತಾಗಿದೆ.

ಭಾನುವಾರ ಮೂರು ಕಾಡಾನೆಗಳ ಹಿಂಡು ಬೆಳೆಗಾರರಾದ ಬಾಲಕೃಷ್ಣ ಬಾಳೂರು, ಶರಣು ಅವರ ಕಾಫಿ ತೋಟ, ಪಂಪ್ ಶೆಡ್ಡ್ಗಳನ್ನು ದ್ವಂಸ ಮಾಡಿದ್ದು ಅಪಾರ ಬೆಳೆ ಹಾನಿ ಸಂಭವಿಸಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳಾದ ಬಸವರಾಜ್, ಪರಮೇಶ್, ಅರಣ್ಯ ರಕ್ಷಕ ದಿನೇಶ್ ಮತ್ತಿತರರು ಬೇಟಿ ನೀಡಿ ಕಾಡಾನೆ ಓಡಿಸಲು ಪ್ರಯತ್ನ ಪಡುತ್ತಿದ್ದಾರೆ.

ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6

ಕುಂದೂರು, ಸಾರಗೋಡು ಮತ್ತಿತರ ಭಾಗಗಳಲ್ಲಿ ಸೋಲಾರ್ ಬೇಲಿ ನಿರ್ಮಿಸಿದ್ದರಿಂದ ಕಾಡಾನೆಗಳಿಂದ ಆ ಭಾಗದಲ್ಲಿ ಬೆಳೆಹಾನಿ ಕಡಿಮೆಯಾಗಿದೆ. ಬಾಳೂರು ಕಡೆಯ ಭಾಗದಲ್ಲಿ ಅರಣ್ಯ ಅಧಿಕಾರಿಗಳು ಸೋಲಾರ್ ಬೇಲಿ ನಿರ್ಮಿಸಿ ಕಾಡಾನೆಗಳನ್ನು ನಿಯಂತ್ರಿಸಬೇಕು. ಇಲ್ಲವಾದರೆ ಕಾಡಾನೆಗಳನ್ನು ಸ್ಥಳಾಂತರಿಸಬೇಕು ಎಂದು ಮೂಡಿಗೆರೆ ತಾಲ್ಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಬಾಲಕೃಷ್ಣ ಒತ್ತಾಯಿಸಿದ್ದಾರೆ.

ವರದಿ: ತನು ಕೊಟ್ಟಿಗೆಹಾರ