ಅಕ್ರಮವಾಗಿ ಖಾತೆ ಬದಲಾವಣೆ ಮಾಡಲಾಗಿದೆ ಎಂದು ಶೃಂಗೇರಿಯ ಭಾರತೀ ಬೀದಿಯ ಮಹಿಳೆಯೋರ್ವರು ಆರೋಪ ಮಾಡಿದ್ದಾರೆ.
ಶೃಂಗೇರಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಇ ಸ್ವತ್ತು ಸಂಖ್ಯೆ 45439 ಮೂಲತಃ ಲಕ್ಷ್ಮಮ್ಮ ಕೋಂ ಡೋಲು ಕಿಟ್ಟಣ್ಣ ಇವರಿಗೆ ಸೇರಿದ ಜಾಗವಾಗಿದ್ದು. ನಂತರ ಖಾತೆಯು ಅಮಿತ ಸತ್ಯನಾರಾಯಣ ಅವರ ಹೆಸರಿನಲ್ಲಿ ಶೃಂಗೇರಿಯ ಪಟ್ಟಣ ಪಂಚಾಯ್ತಿಯಲ್ಲಿ ಇದೆ. ಆದರೆ ಲಕ್ಷ್ಮಮ್ಮ ಅವರ ಮರಣ ಶಾಸನದ ಪ್ರಕಾರ ಇದು ನನಗೆ ಸೇರಿದ್ದಾಗಿದೆ, ಈ ಕುರಿತು ನರಸಿಂಹರಾಜಪುರ ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದೆ. ಆದರೆ ಮೋಸ ಮಾಡುವ ಉದ್ದೇಶದಿಂದ 14-07-2017 ರಂದು ಈ ಜಾಗವನ್ನು ಅಮಿತ ಸತ್ಯನಾರಾಯಣ ಅವರು ಮೂರನೇ ವ್ಯಕ್ತಿಗೆ ಮಾರಾಟ ಮಾಡಿರುತ್ತಾರೆ. ಈ ವಿಷಯ ತಿಳಿದು ನಾನು ದೂರು ಸಲ್ಲಿಸಿದ ನಂತರದಲ್ಲಿ ಖಾತೆಯನ್ನು ಅಮಿತ ಸತ್ಯನಾರಾಯಣ ಅವರ ಹೆಸರಿನಿಂದ ಕ್ರಯಕ್ಕೆ ಕೊಂಡ ರತ್ನಾಕರ ಹಾಗೂ ರಾಘವೇಂದ್ರ ಅವರ ಹೆಸರಿಗೆ ಬದಲಾಯಿಸದೆ ಹಾಗೆಯೇ ಪೆಂಡಿಂಗ್ ಇಟ್ಟಿರುತ್ತಾರೆ. ನಂತರ ನನಗೆ ತಿಳಿಯದಂತೆ ಇತ್ತೀಚೆಗೆ ರಾಜಕೀಯ ಪ್ರಭಾವದಿಂದ ಖಾತೆಯನ್ನು ಬದಲಾವಣೆ ಮಾಡಿರುತ್ತಾರೆ, ಈ ಕುರಿತು ಪಂಚಾಯಿತಿ ಅಧಿಕಾರಿಗಳಿಗೆ ದೂರು ಸಲ್ಲಿಸಿದರೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆರೋಪಕ್ಕೆ ಯಾವುದೇ ಆಧಾರವಿಲ್ಲ, ದುರುದ್ದೇಶದಿಂದ ದೂರು.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ, ಅಮಿತ ಸತ್ಯನಾರಾಯಣ ಅವರಿಂದ ಇತ್ತೀಚೆಗೆ ಜಾಗವನ್ನು ಖರೀದಿಸಿರುವ ರತ್ನಾಕರ್ ಅವರು ಈ ಆರೋಪಕ್ಕೆ ಯಾವುದೇ ಆಧಾರವಿಲ್ಲ, ದುರುದ್ದೇಶದಿಂದ ದೂರು ದಾಖಲಿಸಲಾಗಿದೆ.
ಕಾನೂನು ಸಲಹೆ ಪಡೆದೇ ಜಾಗವನ್ನು ಕೊಂಡುಕೊಂಡಿದ್ದೇವೆ, ಈ ಹಿಂದೆ 7 ರಿಂದ 8 ವರ್ಷಗಳ ಕಾಲ ಕೋರ್ಟ್ ನಲ್ಲಿ ಕೇಸು ನಡೆದೇ ಅಮಿತ ಸತ್ಯನಾರಾಯಣ ಅವರ ಪರವಾಗಿ ಆದೇಶ ಬಂದಿತ್ತು. ಆ ನಂತರ ಅವರಿಂದ ನಾವು ಕೊಂಡು ಕೊಂಡಿದ್ದೇವೆ. ಆದರೆ ನಾವು ಕೊಂಡುಕೊಂಡ ಬಳಿಕ ಕಸ್ತೂರಿ ಅವರು ತಾನೇ ಇದರ ಮಾಲೀಕರು ಎಂದು ತಗಾದೆ ತೆಗೆದಿದ್ದಾರೆ. ಇದಕ್ಕೆ ಯಾವುದೇ ಹುರುಳಿಲ್ಲ, ರಾಜಕೀಯ ದ್ವೇಷ ಇದರ ಹಿಂದೆ ಕೆಲಸ ಮಾಡುತ್ತಿದೆ ಎಂದಿದ್ದಾರೆ.




0 Comments