ಶೃಂಗೇರಿಯ ಅಗ್ನಿಶಾಮಕ ಠಾಣೆಯ ಸಿ. ಸೋಮಶೇಖರ್ ಅವರಿಗೆ ಮುಖ್ಯಮಂತ್ರಿ ಪದಕದ  ಗೌರವ ದೊರೆತಿದೆ. 

ಸೋಮಶೇಖರ್ ಅವರು 23 ವರ್ಷಗಳ ಕಾಲ ನಿರಂತರವಾಗಿ ಅಗ್ನಿಶಾಮಕ ದಳದಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ. ಶೃಂಗೇರಿ ಠಾಣೆಯಲ್ಲಿ ಕಳೆದ ಮೂರು ವರ್ಷಗಳಿಂದ ಸೇವೆಯಲ್ಲಿದ್ದಾರೆ.  14 ಕ್ಕೂ ಹೆಚ್ಚು ರಿವಾರ್ಡ್ ಪಡೆದ ಸೋಮಶೇಖರ್, ಮಲೆನಾಡು ಭಾಗದಲ್ಲಿ ಪ್ರವಾಹ, ಭೂ ಕುಸಿತ ಹಾಗೂ ಇನ್ನಿತರ ತುರ್ತು ಸಂದರ್ಭದಲ್ಲಿ ತಮ್ಮ ಚಾಕ ಚಕ್ಯತೆಯ ಮೂಲಕ ಹಲವರ ಜೀವ ರಕ್ಷಣೆ ಮಾಡಿದ್ದಾರೆ. ಪ್ರಸ್ತುತ  ಲೀಡಿಂಗ್ ಫೈರ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ 2019-20 ನೇ ಸಾಲಿನ ಮುಖ್ಯ ಮಂತ್ರಿ ಪ್ರಶಸ್ತಿ ಹಾಗೂ ಸನ್ಮಾನ ಸ್ವೀಕರಿಸಿದ್ದಾರೆ. ಉತ್ತಮ ಸೇವೆಯನ್ನು ನಿರ್ವಹಿಸಿದ ಹಿನ್ನೆಲೆ  ಸರ್ಕಾರವು, ಲೀಡಿಂಗ್ ಫೈರ್ ಮೆನ್ ಸೋಮಶೇಖರ್ ಅವರಿಗೆ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ.

ನನ್ನ ಪರಿಶ್ರಮಕ್ಕೆ ತಕ್ಕಂತೆ, ಮೇಲಾಧಿಕಾರಿಗಳು ಕೂಡ ಉತ್ತಮ ಸಹಕಾರ ನೀಡುತ್ತಾ ಬಂದಿದ್ದು ನಾನು ಇಂದು ಈ ಸಾಧನೆ ಮಾಡಲು ಸಾಧ್ಯವಾಗಿದೆ. ಸಹಕಾರ ನೀಡಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಸಮರ್ಪಿಸುತ್ತಿದ್ದೇನೆ, ಈ ಪ್ರಶಸ್ತಿ ನನಗೆ ತುಂಬಾ ಖುಷಿ ತಂದು ಕೊಟ್ಟಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಸಾಧನೆ ಮಾಡುವ ಭರವಸೆ ಇದೆ ಎಂದು ತಮ್ಮ ಸಂತಸವನ್ನು ನ್ಯೂಸ್ ಮಲ್ನಾಡ್ ನೊಂದಿಗೆ ಹಂಚಿಕೊಂಡಿದ್ದಾರೆ.

ಈ ಹಿನ್ನೆಲೆ ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿವರ್ಗ,ಹಾಗೂ ಸಾರ್ವಜನಿಕರು ಪ್ರಶಸ್ತಿ ಪಡೆದ ಸೋಮಶೇಖರ್ ಅವರನ್ನು ಅಭಿನಂದನೆಯನ್ನು ಸಲ್ಲಿಸಿದ್ದರು.