ಈ ಭಾಗದ ಜನರು ಭಯದಿಂದಲೇ ಈ ಸೇತುವೆ ಮೇಲೆ ಸಂಚಾರ ಮಾಡಬೇಕಿದೆ, ಈ ಅಪಾಯಕಾರಿ ಸೇತುವೆಗೆ ಜನಪ್ರತಿನಿಧಿಗಳು ಕಾಳಜಿ ವಹಿಸಿ ಸಧ್ಯದಲ್ಲೇ ಸರ್ಜರಿ ಮಾಡಬೇಕಿದೆ.
ಶಾಂತಿಗ್ರಾಮ(ಕೊಗ್ರೆ) ಯಿಂದ ಭೈರೆದೇವರಿಗೆ ಸಂಪರ್ಕ ಕಲ್ಪಿಸುವ " ಹುಲ್ಲಿನಗದ್ದೆ ಸೇತುವೆ" ಯ ಬವಣೆ ಹೇಳಿ ಮುಗಿಯದು. ಇದೊಂದು ಕೇವಲ ಎರಡು ಊರುಗಳನ್ನು ಸಂಪರ್ಕಿಸುವ ರಸ್ತೆಯಾಗಿರದೆ ಶೃಂಗೇರಿ ಮತ್ತು ಹೊರನಾಡಿಗೆ ಸಂಪರ್ಕಿಸುವ ಅತಿ ಸಮೀಪದ ಹಾದಿಯಾಗಿರುತ್ತದೆ. ಎರಡು ಊರುಗಳ ಜನರಷ್ಟೇ ಅಲ್ಲದೆ ದೊಡ್ಡ ಪ್ರಮಾಣದಲ್ಲಿ ಪ್ರವಾಸಿಗರು ಸಂಚರಿಸುವುದು ಇದೇ ರಸ್ತೆ ಮತ್ತು ಸೇತುವೆಯ ಮೇಲೆ.
ನಿತ್ಯವೂ ಸಾವಿರಾರು ಜನರು, ವಾಹನಗಳು ಓಡಾಡುವ ಈ ಸೇತುವೆ ಮಾತ್ರ ಈಗಲೋ ಆಗಲೋ ಮಳೆಯೊಂದಿಗೆ ತೊಳೆದುಹೋಗುವಂತಿದೆ. ಇದು ಸಿಮೆಂಟ್ ಪೈಪಿನಿಂದ ಮಾಡಿದ ಓವರ್ ಫ್ಲೋ ಸೇತುವೆ ಆಗಿದ್ದು. ಒಂದು ಮಳೆ ಬಂತೆಂದರೆ ಮರದ ದಿಮ್ಮಿಗಳು ಪೈಪಿಗೆ ಅಡ್ಡಲಾಗಿ ಕೂತು ಹೊಳೆಯ ನೀರೆಲ್ಲವೂ ಸೇತುವೆಯ ಮೇಲೆ ಹರಿಯುತ್ತದೆ. ಅನೇಕರು ಗೊತ್ತಿಲ್ಲದೆ ಸೇತುವೆಯ ಮೇಲೆ ಹೋಗಿ ಅಪಾಯಕ್ಕೆ ಈಡಾಗಿದ್ದಿದೆ.
Visit:www.kavyaherbaloil.com
ಮೂರು ವರ್ಷಗಳ ಹಿಂದೆ, ಜೋರು ಮಳೆಯೊಂದರಲ್ಲಿ ಕೃಷಿ ಕಾರ್ಮಿಕನಾಗಿದ್ದ ಗಿರೀಶ ಎಂಬುವವರ ಪುತ್ರ ಬದುಕಿ ಬಾಳಬೇಕಾದ ಯುವಕ ಬೈಕಿನಲ್ಲಿ ಇದೇ ಸೇತುವೆಯ ಮೇಲೆ ರಾತ್ರಿ ಹೋಗಬೇಕಾದರೆ ಉಕ್ಕಿ ಹರಿಯುತ್ತಿದ್ದ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದ. ಎರಡು ದಿನಗಳ ನಂತರ ಆತನ ಮೃತ ದೇಹ ಸುಮಾರು ಹತ್ತು ಕಿಲೋಮೀಟರ್ ದೂರದಲ್ಲಿ ಜಯಪುರದ ಸಮೀಪ ಸಿಕ್ಕಿತ್ತು ಆ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ್ದ ನಮ್ಮೆಲ್ಲಾ ಮುಖಂಡರು, ಚುನಾಯಿತ ಪ್ರತಿನಿಧಿಗಳು ಜನರ ಒತ್ತಾಯದ ಮೆರೆಗೆ ಶೀಘ್ರದಲ್ಲಿ ಈ ಸೇತುವೆಯನ್ನು ಸುಸಜ್ಜಿತ ಸೇತುವೆಯಾಗಿ ಮೇಲ್ದರ್ಜೆಗೆ ಏರಿಸುವುದಾಗಿ ಪ್ರತಿಜ್ಞೆ ಮಾಡಿ ಭರವಸೆ ನೀಡಿದ್ದರು. ಇದೀಗ ಮೂರು ವರ್ಷಗಳ ನಂತರ ಅಂದು ಮೃತನಾದ ಆ ಯುವಕನ ತಂದೆ ಗಿರೀಶ ಕೂಡ ಮೃತರಾಗಿದ್ದಾರೆ. ಆದರೆ ಈ ಸೇತುವೆಯ ಕಡೆಗೆ ಯಾವ ನಾಯಕರೂ ಮತ್ತೆ ತಿರುಗಿ ನೋಡಿಲ್ಲ. ಸೇತುವೆ ದುರಸ್ತಿ ಇರಲಿ, ಕನಿಷ್ಠ ಒಂದು ಅಪಾಯ ಸೂಚಕ ಫಲಕ ಕೂಡ ಹಾಕಿಲ್ಲ. ಪ್ರತಿ ಮಳೆಗಾಲದಲ್ಲೂ ಆಗಾಗ ಎರಡೂ ಊರುಗಳ ಸಂಪರ್ಕ ಕಡಿದು ಹೋಗುತ್ತದೆ ಮತ್ತು ಭಯದಿಂದಲೆ ಸಂಚರಿಸುವಂತಾಗುತ್ತದೆ. ಅಂದಿನಿಂದ ಇಂದಿನವರೆಗೂ ಸೇತುವೆ ಕೇವಲ ಭರವಸೆಯಾಗಿಯೇ ಉಳಿದಿದೆ.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6
ಈ ಸೇತುವೆಯ ಬದಲಿಗೆ ಸುಸಜ್ಜಿತ ಹೊಸ ಸೇತುವೆಯನ್ನು ಮಾಡಲು ಇನ್ನೆಷ್ಟು ಜನ ಪ್ರಾಣ ಕಳೆದುಕೊಳ್ಳ ಬೇಕೋ ದೇವನೇ ಬಲ್ಲ ಎನ್ನುತ್ತಾರೆ ಕೃಷಿಕರಾದ ವಿಜಯರಂಗ ಕೋಟೆತೋಟ..
ವರದಿ: ಶಶಿ ಬೆತ್ತದಕೊಳಲು





0 Comments