ಶಿವಮೊಗ್ಗ : ಅಕ್ರಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾವನ್ನು ಸಾಗಿಸುತ್ತಿದ್ದ ಭದ್ರಾವತಿಯ ಸಂಕ್ಲಿಪುರದ ಮುರುಗ ಎಂಬ ಅಪರಾಧಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ.
ಕಾರೇಹಳ್ಳಿ ಚೆಕ್ ಪೋಸ್ಟ್ ನಲ್ಲಿ ಈತನನ್ನು ಬಂಧಿಸಿದ್ದು, ತರೀಕೆರೆಯಿಂದ ಶಿವಮೊಗ್ಗದ ಕಡೆಗೆ ಕಾರಿನಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕಾರಿನ ಬಾಗಿಲು ತೆಗೆದು ತಪಾಸಣೆ ನಡೆಸುವ ವೇಳೆಗೆ ಎಲ್ಲೂ ಗಾಂಜಾ ಪತ್ತೆಯಾಗಲಿಲ್ಲ , ಬಳಿಕ ಹಿಂಬಾಗದ ಬಂಪರ್ ನ ಒಳಭಾಗ ಹಾಗೂ ಸ್ಲೈಡಿಂಗ್ ಡೋರ್ ಒಳಗೆ, ಚಾಸಿಯಲ್ಲಿ, ಪೆಟ್ರೋಲ್ ಟ್ಯಾಂಕ್ ಬಳಿ ಗಾಂಜಾ ಪಾಕೆಟ್ಗಳನ್ನು ಇರಿಸಿದ್ದು ಕಂಡುಬಂದಿದೆ. ಒಟ್ಟು ಸುಮಾರು 48 ಕೆ.ಜಿ 656ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದ್ದು. ಈ ಕೃತ್ಯಕ್ಕೆ ಆತ ಬಳಸಿದ್ದ ಮೊಬೈಲ್ ಫೋನ್ ಹಾಗೂ ಓಮ್ನಿ ಕಾರನ್ನು ಸೀಜ್ ಮಾಡಲಾಗಿದೆ.
ಶಿವಮೊಗ್ಗ ಪೊಲೀಸರು ಈ ರೀತಿಯ ಗಾಂಜಾ ಸಾಗಣೆದಾರರಿಗೆ ಬಿಸಿ ಮುಟ್ಟಿಸಲು ವಿಶೇಷ ತಂಡ ಮತ್ತು ತನಿಖಾದಳವನ್ನು ರಚಿಸಿ ಕೊಂಡಿದ್ದಾರೆ.ಈ ರೀತಿಯ ಪೆಡ್ಲರ್ ಗಳನ್ನು ಬಂಧಿಸುವಲ್ಲಿ ಈ ಪಡೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ.



0 Comments