ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಡಿಗೆರೆಯ ಗೋಣಿಬೀಡು ಆಸ್ಪತ್ರೆಯಲ್ಲಿ ಹೃದಯಘಾತದಿಂದ ಪತ್ರಕರ್ತ ಸುನೀಲ್ (43) ಕೊನೆಯುಸಿರೆಳಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿಯ ಸುನೀಲ್ ಅವರು ಈ ಹಿಂದೆ ರವಿ ಬೆಳಗೆರೆಯ ಶಿಷ್ಯರಾಗಿ ಮುನ್ನಲೆಗೆ ಬಂದವರು.

ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಸುನಿಲ್, ಕೆಲವು ವರ್ಷಗಳ ಹಿಂದೆ ರವಿ ಬೆಳಗೆರೆ - ಸುನೀಲ್ ಹೆಗ್ಗರವಳ್ಳಿ ನಡುವೆ ವೈಮನಸ್ಸು ಉಂಟಾಗಿ ಹೊರಬಂದಿದ್ದರು.

ಆ ಬಳಿಕ ರಾಷ್ಟ್ರಕೂಟ ನ್ಯೂಸ್ ಎಂಬ ಚಾನೆಲ್ ಹಾಗೂ ಚಾರ್ಲಿ ಟೈಮ್ಸ್ ಎಂಬ ಪತ್ರಿಕೆ ನಡೆಸುತ್ತಿದ್ದರು.