ಜಿಲ್ಲೆಯ ಮಲೆನಾಡು ಭಾಗದಲ್ಲಿರುವಂತಹ ಕಾಫಿ, ಅಡಕೆ, ಕಾಳುಮೆಣಸು, ಬೆಳೆಗಾರರು ಮತ್ತು ರೈತರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ಜಿಲ್ಲೆಯ ಶಾಸಕರು, ಉಪಸಭಾಪತಿ, ಆಲ್ದೂರು ಮಂಡಲಿ ಪಧಾಧಿಕಾರಿಗಳನ್ನು ಒಳಗೊಂಡನಂತಹ ನಿಯೋಗ ಕೇಂದ್ರ ಕೃಷಿ ಖಾತೆ ಹಾಗೂ ರಾಜ್ಯಸಚಿವೆಯಾಗಿರುವಂತಹ ಶೋಭಾ ಕರಂದ್ಲಾಜೆ ಅವರಿಗೆ ದೆಹಲಿಯಲ್ಲಿ ಮನವಿಯನ್ನು ಸಲ್ಲಿಸಿದರು.

ಕಾಫಿ ಬೆಳೆಗೆ ಸಂಬಧಿಸಿದಂತೆ ಸರ್ಫೇಸಿ ಕಾಯ್ದೆಯನ್ನು ಹಿಂಪಡೆಯಬೇಕು. ಅಡಕೆ, ಕಾಳೂಮೆಣಸು ಅಕ್ರಮವಾಗಿ ಭಾರತದ ಮಾರುಕಟ್ಟೆ ಪ್ರವೇಶಿಸಿದಂತೆ ಕ್ರಮ ಕೈಗೊಳ್ಳಬೇಕು ಹಾಗೆಯೇ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಪದೇಪದೇ ದಾಖಲೆಗಳನ್ನು ನೀಡುತ್ತಾರೆ ಇದನ್ನು ನೀಡುವ ಬದಲು ಸರ್ಕಾರದ ಬಳಿಯಲ್ಲೇ ಇರುವ ದಾಖಲೆಗಳನ್ನು ಪರಿಗಣಿಸಿ ಏಕಗವಾಕ್ಷಿ ಪದ್ಧತಿ ತಂದು ನೆರವಾಗುವಂತೆ ಒತ್ತಾಯಿಸಿದರು.

ಕಂದಾಯ ಭೂಮಿಯನ್ನು ಡೀಮ್ಡ್ ಅರಣ್ಯದಿಂದ ಹೊರಗಿಡಬೇಕು. ಸಂಕಷ್ಟದಲ್ಲಿರುವಂತಹ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಜಿಲ್ಲೆಯ ರೈತ ವರ್ಗಕ್ಕೆ ಕೇಂದ್ರದ ವಿವಿಧ ಯೋಜನೆಯಡಿ ವಿಶೇಷ ಅನುದಾನ ನೀಡಬೇಕು. ಕೇಂದ್ರ ತೆಂಗು ಮಂಡಳಿಗೆ ತೆಂಗು ಬೆಳೆಗಾರರನ್ನೇ  ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು ಮನವಿ ಮಾಡಿದರು. 

ಇವರು ನೀಡಿದ ಪ್ರಮುಖ ಬೇಡಿಕೆಗಳು ಈ ಕೆಳಗಿನಂತಿವೆ 

ಸರ್ಫೇಸಿ ಕಾಯ್ದೆ ಹಿಂಪಡೆಯಬೇಕು

ಅಡಕೆ, ಕಾಳುಮೆಣಸು ಅಕ್ರಮ ಆಮದನ್ನು ತಡೆಗಟ್ಟಬೇಕು 

ತೆಂಗು ಬೆಳೆಗಾರರನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ

 ಈ ಸಂದರ್ಭದಲ್ಲಿ ವಿಧಾನಪರಿಷತ್ ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಶಾಸಕ ಬೆಳ್ಳಿಪ್ರಕಾಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ ಕಲ್ಮರುಡಪ್ಪ, ಉಪಾದ್ಯಕ್ಷ  ದೀಪಕ್ ದೊಡ್ಡಯ್ಯ , ಆಲ್ದೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುದರ್ಶನ್, ಕಿಶನ್, ಹೆಡದಾಳ್ ಸಂಪತ್, ರವಿ ಬಸರವಳ್ಳಿ, ದಿನೇಶ್ ಮುಗುಳುವಳ್ಳಿ ಭಾಗವಹಿಸಿದ್ದರು.