ಈ ಕಾರ್ಯಕ್ರಮದಲ್ಲಿ ಅಮ್ಮ ಫೌಂಡೇಶನ್ ಸಂಸ್ಥಾಪಕ ಸುಧಾಕರ್ ಶೆಟ್ಟಿ, ಕೆ. ಡಿ. ಪಿ ಸದಸ್ಯರಾದ ಮಧುಸೂದನ್, ಉದ್ಯಮಿ ಪ್ರಸನ್ನ ಶೆಟ್ಟಿ, ಹಾಗೂ ಶೃಂಗೇರಿಯ ಕ್ಷೌರಿಕ ಸಂಘದ ಅಧ್ಯಕ್ಷರಾದ ನವೀನ್ ಭಂಡಾರಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕುರಿತು ಮಾತನಾಡಿದ ಸುಧಾಕರ್ ಎಸ್ ಶೆಟ್ಟಿ ಅವರು, ಕೊರೋನಾ ಮಹಾಮಾರಿ ಯ ಮೂರನೇ ಅಲೆಯು ಇನ್ನೇನು ಆರಂಭವಾಗುತ್ತಿದೆ, ಈ ಸಂಧರ್ಭದಲ್ಲಿ ಮುಖ್ಯವಾಗಿ ಜನರ ಸಂಪರ್ಕದಲ್ಲಿರುವ ಕ್ಷೌರಿಕರ ಕ್ಷೇಮವನ್ನು ನಾವು ನೋಡಿಕೊಳ್ಳಬೇಕಿದೆ ಈ ಹಿನ್ನೆಲೆಯಲ್ಲಿ ಜನರೊಂದಿಗೆ ಮುಖ್ಯ ವಾಹಿನಿಯಲ್ಲಿ ಕೆಲಸ ಮಾಡುವ ಕ್ಷೌರಿಕರಿಗೆ ಫೇಸ್ ಶೀಲ್ಡ್ ಅಗತ್ಯ ಎಂದೆನಿಸಿ ಇಂದು ಶೃಂಗೇರಿ ತಾಲೂಕಿನ ಎಲ್ಲಾ ಕ್ಷೌರಿಕರಿಗೆ ಫೇಸ್ ಶೀಲ್ಡ್ ವಿತರಣೆ ಮಾಡುತ್ತಿದ್ದೇವೆ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕೂಡ ಸವಿತಾ ಸಮಾಜದ ಬಂಧುಗಳೊಂದಿಗೆ ನಾನಿದ್ದೇನೆ ಎಂಬ ಮಾತನ್ನು ಹೇಳಿದರು.



0 Comments