ಕೊಪ್ಪ: ಕರೊನಾ ಲಸಿಕೆಯನ್ನು ವಿತರಣೆ ಮಾಡುವ ಪ್ರಕ್ರಿಯೆಯಲ್ಲಿ  ಕಾಂಗ್ರೆಸ್ ಹಸ್ತಕ್ಷೇಪ ಮಾಡುತ್ತಿದೆ, ಎಲ್ಲಾ ವರ್ಗದ ಜನರಿಗೆ ಸರಿಯಾಗಿ ಲಸಿಕೆ ನೀಡುತ್ತಿಲ್ಲ, 45 ವರ್ಷ ಮೇಲ್ಪಟ್ಟವರಿಗೆ ಸಿಗಬೇಕಿದ್ದ ಲಸಿಕೆಯಲ್ಲಿ ಕಾಂಗ್ರೆಸ್ ಮುಖಂಡರು ದಂಧೆ ನಡೆಸುತ್ತಿದ್ದಾರೆಂದು ಆರೋಪಿಸಿ ಕೊಪ್ಪದ ಕಾಂಗ್ರೆಸ್ ಕಛೇರಿಗೆ, ಬಿಜೆಪಿ ಮುಖಂಡರು ಮುತ್ತಿಗೆ ಹಾಕಿ ಶಾಸಕ ಟಿ.ಡಿ ರಾಜೇಗೌಡ ಅವರ ವಿರುದ್ಧವಾಗಿ ಪ್ರತಿಭಟನೆ ನಡೆಸಿದರು.

ದ್ಯಾವೇಗೌಡ ವೃತ್ತದಲ್ಲಿರುವ ಶಾಸಕ ಟಿ ಡಿ ರಾಜೇಗೌಡ ಅವರ ಕಛೇರಿಗೆ ಸೋಮವಾರ ಬಿಜೆಪಿ ಮುಖಂಡರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು. ಸರ್ಕಾರ ಶ್ರೀಮಂತರು ಬಡವರು ಎಂದು ನೋಡದೆ ಎಲ್ಲರಿಗೂ ಉಚಿತವಾಗಿ  ಲಸಿಕೆಯನ್ನು ವಿತರಣೆ ಮಾಡುತ್ತಿದೆ. ಆದರೆ ಕಾಂಗ್ರೆಸ್ಸಿಗರು ಮೊದಲು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದರು ಆದರೆ ಈಗ ಅವರೇ ಲಸಿಕೆಯನ್ನು ಕದ್ದು ಪಡೆದುಕೊಳ್ಳುತ್ತಿದ್ದಾರೆ. ಅವರ ಈ ದಂಧೆಯಿಂದಾಗಿ ಕೊರೊನಾದಿಂದ ಆಗುತ್ತಿರುವ ಸಾವು-ನೋವು ಹೆಚ್ಚಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ. ಶಾಸಕ ಟಿ.ಡಿ ರಾಜೇಗೌಡ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಮುರೊಳ್ಳಿಯವರು ಆರೋಗ್ಯ ಇಲಾಖೆಯಲ್ಲಿರುವಂತಹ ಅಧಿಕಾರಿಗಳನ್ನು ಹೆದರಿಸಿ ತಮ್ಮ ಕಾರ್ಯಕರ್ತರಿಗೆ ಲಸಿಕೆಯನ್ನು ಕೊಡಿಸಿದ್ದಾರೆ. 45 ವರ್ಷ ಮೇಲ್ಪಟ್ಟವರಿಗೆ ದೊರಕಬೇಕಿದ್ದ ಲಸಿಕೆ ಕಾಂಗ್ರೆಸ್ ಕಾರ್ಯಕರ್ತರಿಗೆ ದೊರೆತಿದೆ ಎಂದು ದೂರಿದ್ದಾರೆ. 

ಈ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಎಸ್ ಎನ್ ರಾಮಸ್ವಾಮಿ .ದಿನೇಶ್ ಹೊಸೂರು. ಜಗದೀಶ್. ಜಯಂತ್. ಅನೂಪ್. ಅಜಿತ್. ಸುಜಾತ. ರೇಖಾ. ಸುಮ. ಸತೀಶ್ ಅದ್ದಡ. ಹಾಗೂ ಪುಣ್ಯಪಾಲ್ ಮುಂತಾದವರಿದ್ದರು.