ಚಿಕ್ಕಮಗಳೂರು: ಬೈಕಿನ ಹೆಡ್‍ಲೈಟ್ ಡಿಮ್ ಅಂಡ್ ಡಿಪ್ ಮಾಡಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯ ಸೇರಿ ನಾಲ್ವರ ತಂಡ, ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಯುವಕನ ಮೇಲೆ ಹಲ್ಲೆ  ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಪಟ್ಟಣದ ಹೊರವಲಯದಲ್ಲಿ ನಡೆದಿದೆ.

ಬಜರಂಗದಳ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಪ್ರದೀಪ್ ಹಾಗೂ ನಿತಿನ್ ಎಂಬ ಯುವಕರು ಕೊಪ್ಪ ತಾಲೂಕಿನ ಗುಣವಂತೆ ಸಮೀಪ ವಾಷಿಂಗ್ ಮೆಷಿನ್ ರಿಪೇರಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿಕೊಂಡು ಮಕ್ಕಿಮನೆ ಮಾರ್ಗವಾಗಿ ಕೊಪ್ಪ ಪಟ್ಟಣದ ಮೂಲಕ ವಾಪಸ್ ಬರುವಾಗ ಈ ಹಲ್ಲೆ ನಡೆದಿದೆ.



ದಾರಿಯಲ್ಲಿ ಲೈಟ್ ಡಿಮ್ ಅಂಡ್ ಡಿಪ್ ಮಾಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಹರಂದೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಉಳಿದ ಮೂವರು ಸೇರಿ ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. 



ಈ ಕುರಿತು ಕೊಪ್ಪ ಠಾಣೆಯ  ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಪ್ರಕರಣದ ತನಿಖೆಯನ್ನು ಆರಂಭಿಸಿದ್ದಾರೆ.