ಚಾರ್ಮಾಡಿ ಘಾಟ್ ನ ಜಲಪಾತಗಳ ಬಳಿ ಜನ ಜಂಗುಳಿಯಾಗಿದೆ. ಲಾಕ್ ಡೌನ್ ಸಡಿಲಗೊಂಡ ನಂತರದ ಅವಧಿಯಲ್ಲಿ ಪ್ರವಾಸಿಗರು ಹೆಚ್ಚಾಗಿ ಚಾರ್ಮಾಡಿ ಘಾಟ್ ಗೆ ಭೇಟಿ ನೀಡುತ್ತಿದ್ದು ವೀಕೆಂಡ್ ದಿನಗಳಲ್ಲಂತೂ ವಾಹನ ಸಂಚಾರಕ್ಕೆ ಕೂಡ ಅಡ್ಡಿಯಾಗುವ ರೀತಿಯಲ್ಲಿ ಜನ ದಟ್ಟಣೆ ಉಂಟಾಗಿದೆ. 

ಘಾಟ್ ನ ಮಧ್ಯದಲ್ಲಿ ಬೀಳುವ ಜಲಪಾತಗಳ ಬಳಿ ಜನರು ಮೋಜು ಮಸ್ತಿಯಲ್ಲಿ ಮೈ ಮರೆಯುತ್ತಿದ್ದಾರೆ.  

ಮೋಜು ಮಸ್ತಿಯಲ್ಲಿ ಮೈ ಮರೆತ ಪ್ರವಾಸಿಗರು.

 ವಾಹನ ಸಂಚಾರಕ್ಕೆ ಪ್ರವಾಸಿಗರ ದಂಡಿನಿಂದ ಬಹಳ ಅಡ್ಡಿಯಾಗಿದೆ, ಈ ಮಧ್ಯೆ ಬೆಂಗಳೂರಿನ ಪ್ರವಾಸಿಯೊಬ್ಬ ಲಾರಿ ಚಾಲಕ ನಿಗೆ ದಾರಿ ಬಿಡದೆ, ರೋಡ್ ನ ಮಧ್ಯದಲ್ಲೇ ಮಾತಿನ ಚಕಮಕಿಗೆ ಇಳಿದಿದ್ದ, ಮಾತು ಜೋರು ಜೋರಾಗುತ್ತಾ ಹೊಡೆದಾಟಕ್ಕೆ ಇಳಿದು ಬಿಟ್ಟಿದ್ದರು, ನಂತರ ಉಳಿದ  ಪ್ರವಾಸಿಗರು ಅವರಿಬ್ಬರನ್ನು ಸಮಾಧಾನ ಪಡಿಸಿ ಅಲ್ಲಿಂದ ತೆರಳುವಂತೆ ಮಾಡಿದರು. 



ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ  ಓಡಾಡುತ್ತಿರುವ  ಜನರು.

ಸೆಲ್ಫೀ ಗೋಳು :

ಕೊರೋನ ವೈರಸ್ ಎಂಬ ಮಹಾಮಾರಿ ರೋಗವನ್ನು ಮರೆತ ಜನರು , ಸೆಲ್ಫಿಗಾಗಿ ಎಲ್ಲೆಡೆ ಮುಗಿಬೀಳುತ್ತಿದ್ದಾರೆ.  ಅದರಲ್ಲಿಯೂ ಚಾರ್ಮಾಡಿ ವ್ಯೂ ಪಾಯಿಂಟ್ ನಲ್ಲಂತೂ ಸೆಲ್ಫಿ ಅಬ್ಬರ ಜೋರಾಗಿದೆ. 

ಪ್ರವಾಸಿಗರು ಅಂತರ ಕಾಪಾಡಿಕೊಳ್ಳದೆ ಮಾಸ್ಕ್ ಸರಿಯಾಗಿ ಧರಿಸದೇ ಸೆಲ್ಫಿ ಗಾಗಿ ಪ್ರಜ್ಞೆಯಿಲ್ಲದೇ ಒಂದೆಡೆಯಿಂದ ಇನ್ನೊಂದೆಡೆಗೆ ಧಾವಿಸುತ್ತಿದ್ದಾರೆ. 

ಪೊಲೀಸರು ಈ ಕುರಿತು ಹೆಚ್ಚಿನ ಗಮನ ಹರಿಸಬೇಕೆಂದು  ಸ್ಥಳೀಯರು ಮನವಿ ಮಾಡಿದ್ದಾರೆ.

ವರದಿ : ತನು ಕೊಟ್ಟಿಗೆಹಾರ