ಚಿಕ್ಕಮಗಳೂರು : ಜಿಲ್ಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಇನ್ನೂವಾ ಕಾರು ಮರಕ್ಕೆ ಡಿಕ್ಕಿ ಹೊಡೆದು ಇಬ್ಬರು ರೈತ ಮುಖಂಡರು ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಹಲನ್ ಮೌಂಟನ್ ವ್ಯೂ ಶಾಲೆಯ ಸಮೀಪ ನಡೆದಿದೆ.

visit:www.kavyaherbaloil.com

ಕಾರಿನಲ್ಲಿ ಮೂವರು ವ್ಯಕ್ತಿಗಳು ನವಗುಂದದಿಂದ ಬೇಲೂರಿಗೆ ಹೋಗುತ್ತಿದ್ದ ವೇಳೆಯಲ್ಲಿ  ಈ ಘಟನೆ ಸಂಭವಿಸಿದೆ.  ಈ  ಘಟನೆಯಲ್ಲಿ ಬೇಲೂರು ವಾಸಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುಖಂಡ  ರಾಮಸ್ವಾಮಿ ( 70 ). ರಾಮ ರಾಜ್ಯ ರೈತ ಸಂಘದ ಕಾರ್ಯದರ್ಶಿ ಬೇಲೂರಿನ ರಾಮ (55 ) ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಮೂವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಗ್ರಾಮಾಂತರ ಪೂಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಳೆಗಾಲದಲ್ಲಿ ಜಿಲ್ಲೆಗೆ ಬರುವ ವಾಹನ ಸವಾರರು ಮಲೆನಾಡಿನ ಆಯಕಟ್ಟಿನ ರಸ್ತೆಗಳನ್ನು ಅರಿತು ಜಾಗರೂಕರಾಗಿ ವಾಹನ ಸಂಚಾರ ಮಾಡಬೇಕೆಂದು ಚಿಕ್ಕಮಗಳೂರಿನ ಪೋಲಿಸ್ ಅಧಿಕಾರಿಗಳು ತಿಳಿಸಿದ್ದಾರೆ.  

 ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ https://forms.gle/hJoKNWwWAXZRZiZF6

ಈಗ, ಹಾಸನ ಪೊಲೀಸರು ಕೂಡ ಪ್ರಕಟಣೆ ಹೊರಡಿಸಿದ್ದು ಸಕಲೇಶಪುರದ ದೋಣಿಗಲ್ ನಲ್ಲಿ ರಸ್ತೆ ಕುಸಿದಿದ್ದು, ಎಲ್ಲಾ ವಾಹನ ಸವಾರರು ಚಾರ್ಮಾಡಿ ಘಾಟ್ ನ ಮೂಲಕವೇ ಮಂಗಳೂರಿಗೆ ಸಂಚರಿಸಲು ತಿಳಿಸಿದ್ದಾರೆ. ಆದರೆ ಈಗಾಗಲೇ ಚಾರ್ಮಾಡಿ ಘಾಟ್ ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು, ಮಂಜು ಮುಸುಕಿನ ನಡುವೆ ವಾಹನ ಪ್ರಯಾಣಿಕರು ಪರದಾಡುವಂತ ಸ್ಥಿತಿಯಿದೆ. ವಾಹನಗಳು ಹೆಚ್ಚಾದಂತೆ ಅಪಘಾತಗಳ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆಗಳಿವೆ.