ಮಳೆ ದೇವರು ಎಂದೇ ಖ್ಯಾತಿ ಪಡೆದಿರುವ ಶೃಂಗೇರಿ ತಾಲೂಕಿನ ಕಿಗ್ಗಾದ ಋಷ್ಯಶೃಂಗ ದೇವಾಲಯಕ್ಕೆ ತೆರಳಿ ಬಿಜೆಪಿ ಯುವ ಮೋರ್ಚಾ ವತಿಯಿಂದ ರಾಜ್ಯದಲ್ಲಿ ಸಮರ್ಪಕ ಮಳೆಗಾಗಿ ಶ್ರೀಶಾಂತಾಋಷ್ಯಶೃಂಗೇಶ್ವರ ಸ್ವಾಮಿಯಲ್ಲಿ ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಶ್ರೇಯಸ್ ಕವಿಲುಕೊಡಿಗೆ, ಮಂಡಲ ಯುವ ಮೋರ್ಚಾ ಅಧ್ಯಕ್ಷರಾದ ಸುನಿಲ್ ಸಂಪೆಕೊಳಲು, ಕೊಪ್ಪ ಯುವಮೋರ್ಚಾ ಉಪಾಧ್ಯಕ್ಷ ಸುಭಾಷ್ ಚಂದ್ರ, ಶೃಂಗೇರಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸಚಿನ್ ಹಾಗೂ ಸಂಜಿತ್, ಕೌಶಿಕ್ ಕಿಗ್ಗಾ, ಪರೀಕ್ಷಿತ್, ಚೇತನ್, ಆಶಿಶ್ ಕಿಗ್ಗಾ, ಇತರರು ಉಪಸ್ಥಿತರಿದ್ದರು.
ಈ ಕುರಿತು ಮಾತನಾಡಿದ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೋಟ್ಯಾನ್ "ಸಕಾಲಕ್ಕೆ ಮಳೆ ಬಂದು, ರೈತರ ಸಂಕಷ್ಟಗಳು ನೀಗಬೇಕು. ಮಳೆಗೂ ಒಬ್ಬ ದೇವರಿದ್ದಾನೆ ಎಂಬುದು ಹಿಂದೂ ಧರ್ಮದ ನಂಬಿಕೆ. ಆತನನ್ನು ಆರಾಧನೆಯಿಂದ ಸಂಪ್ರೀತಗೊಳಿಸಿದರೆ ಮಳೆ ಧರೆಗಿಳಿಯುತ್ತದೆ ಎಂಬುದು ನಮ್ಮ ಧಾರ್ಮಿಕ ನಂಬಿಕೆ. ಅದಕ್ಕೆ ಪೂರಕವಾಗಿ ವಿಜ್ಞಾನಕ್ಕೂ ಸವಾಲೆಸೆಯುವಂತೆ ಕಿಗ್ಗಾದ ಖುಷ್ಯಶೃಂಗ ಸ್ವಾಮಿಯ ಮಹಿಮೆ ಎಲ್ಲೆಡೆ ತಿಳಿದಿದೆ. ಅದಕ್ಕಾಗಿ ಇಂದು ಮಳೆ ದೇವರಾದ ಶ್ರೀ ಶಾಂತ ಋಷ್ಯಶೃಂಗೇಶ್ವರ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡಿದ್ದೇವೆ" ಎಂದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿಸಲು ಇಲ್ಲಿ ಕ್ಲಿಕ್ ಮಾಡಿ https://forms.gle/hJoKNWwWAXZRZiZF6




0 Comments