ಶೃಂಗೇರಿಯ ರೋಟರಿ ಸಂಸ್ಥೆಯಿಂದ ವಿಶ್ವ ವೈದ್ಯರ ದಿನದ ಅಂಗವಾಗಿ, ಶೃಂಗೇರಿಯ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಡಾ. ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು, ಅವರ ಕಾರ್ಯ ಪ್ರವೃತ್ತಿಯನ್ನು ನೆರೆದಿದ್ದ ರೋಟರಿ ಸಂಸ್ಥೆಯ ಪದಾಧಿಕಾರಿಗಳು ಹೇಳಿದರು ಮತ್ತು ಅವರ ಸೇವೆಗೆ ತುಂಬು ಹೃದಯದ ಅಭಿನಂದನೆಗಳನ್ನು ಸಮರ್ಪಿಸಿದರು ಹಾಗೂ ಅವರ ನಿವೃತ್ತಿ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು. 

ಮತ್ತೋರ್ವ ಪ್ರಸೂತಿ ತಜ್ಞರಾದ ಡಾ. ದಯಾನಂದ್ ಅವರನ್ನು ಸನ್ಮಾನ ಮಾಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ರೋಟರಿ ಸಂಸ್ಥೆಯ ಅಧ್ಯಕ್ಷರಾದ ಶಿವಮೂರ್ತಿ ಹೆಚ್.ಎ, ನಾಗೇಶ್ ಕಾಮತ್, ಮಂಜುನಾಥ್ ಗೌಡ, ವೇಣು ಮಾಧವ ನಾಯಕ್,ಹಾಗೂ ಶೃಂಗೇರಿ ಪೊಲೀಸ್ ಠಾಣಾಧಿಕಾರಿ ರವಿ ಬಿ.ಎಸ್ ಉಪಸ್ಥಿತರಿದ್ದರು.